ಭಟ್ಕಳದಲ್ಲಿ ಗಣರಾಜ್ಯೋತ್ಸವ: ಭಾರತ ಸಂಸ್ಕೃತಿಯ ರಕ್ಷಣೆಯ ಪ್ರತಿಜ್ಞೆ ಸ್ವೀಕಾರ

Update: 2020-01-26 11:03 GMT

ಭಟ್ಕಳ: ಇಲ್ಲಿನ ಯುವಕರು ವಿ ದಿ ಪೀಪಲ್ ಆಫ್ ಇಂಡಿಯಾ ಮೊವಮೆಂಟ್ ಹೆಸರಲ್ಲಿ ನವಾಯತ್ ಕಾಲನಿಯ ತಾಲೂಕು ಕ್ರೀಡಾಂಗಣದ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿ ರಾಷ್ಟ್ರದ್ವಜವನ್ನು ಪ್ರದರ್ಶಿಸುತ್ತ 71ನೇ ಗಣರಾಜ್ಯೋತ್ಸವವನ್ನು ಆಚರಿಸಿದರು.

ಶನಿವಾರ ಮಧ್ಯಾಹ್ನದಿಂದಲೆ ಗಣರಾಜ್ಯೋತ್ಸವ ಸಮಾರಂಭ ಆಚರಿಸಲು ಯುವಕರು ತಾಲೂಕು ಕ್ರೀಡಾಂಗಣದಲ್ಲಿ ಸೇರಬೇಕೆಂದು ವಾಟ್ಸಪ್ ಸಂದೇಶ ವೈರಲ್ ಆಗಿತ್ತು. ಇದನ್ನು ಅರಿತ ಪೊಲೀಸರು ರಾತ್ರಿ 11 ಗಂಟೆಗೆ ತಾಲೂಕು ಕ್ರೀಡಾಂಗಣ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ವಾಹನವನ್ನು ನಿಲ್ಲಿಸಿದ್ದು ಕಾರ್ಯಕ್ರಮಕ್ಕೆ ಇಲಾಖೆಯ ಅನುಮತಿಯಿಲ್ಲ ಎಂಬ ಸಬೂಬು ನೀಡುತ್ತ ಯುವಕರನ್ನು ಕ್ರೀಡಾಂಗಣ ಒಳಗೆ ಹೋಗದಂತೆ ತಡೆದರು ಎಂದು ತಿಳಿದುಬಂದಿದೆ. ಆದರೆ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಕರು ಶಾಂತ ರೀತಿಯಲ್ಲಿ ರಾಷ್ಟ್ರದ್ವಜವನ್ನು ಪ್ರದರ್ಶಿಸುತ್ತ ಮೇಣದ ಬತ್ತಿಗಳನ್ನು ಉರಿಸಿ ರಾತ್ರಿ 12ಗಂಟೆಯಾಗುತ್ತಲೆ ಉತ್ಸಾಹದಿಂದ ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿ ಪ್ರಸ್ತಾವನ್ನು ಓದಿದರು. ಒಂದೂಗೂಡಿ ಬಾಳುವ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಯುವಕರು ಪ್ರತಿಜ್ಞೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News