ಉಡುಪಿ: ಅಲ್ಲಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Update: 2020-01-26 14:09 GMT

ಉಡುಪಿ: ವಿದ್ಯೋದಯ ಟ್ರಸ್ಟ್ ವಿದ್ಯಾಸಂಸ್ಥೆಗಳು

ಉಡುಪಿ, ಜ.26: ದೇಶದ ರಕ್ಷಣೆಯಲ್ಲಿ ಸಿಗುವ ಆತ್ಮಸಂತೃಪ್ತಿ ಎಲ್ಲಕ್ಕಿಂತಲೂ ಮಿಗಿಲಾದುದು. ಜೀವನದಲ್ಲಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ಭಾರತೀಯ ಸೇನೆಯ ಕರ್ನಲ್ ಎಂ.ಮಾಧವ ಶಾನುಭೋಗ್ ವಿದ್ಯೋದಯ ಟ್ರಸ್ಟ್ ವಿದ್ಯಾಸಂಸ್ಥೆಗಳ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕರೆ ನೀಡಿದರು.

ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಗಳಾದ ವಿದ್ಯೋದಯ ಪದವಿ ಪೂರ್ವ ಕಾಲೇಜು, ವಿದ್ಯೋದಯ ಪಬ್ಲಿಕ್ ಸ್ಕೂಲ್, ವಿದ್ಯೋದಯ ವಿದ್ಯಾಲಯ, ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ವಿದ್ಯೋದಯ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಕೆ.ಗಣೇಶ್ ರಾವ್, ಕೋಶಾಧಿಕಾರಿ ಪದ್ಮರಾಜ ಆಚಾರ್ಯ, ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದರು.

ಜಾತ್ಯತೀತ ಜನತಾ ದಳ ಕಚೇರಿ
71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮ ಜನತಾದಳ (ಜಾತ್ಯಾತೀತ) ಉಡುಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಟ್ಟಿ ನೇತೃತ್ವದಲ್ಲಿ ನೆರೆವೇರಿತು.

ಈ ಸಂದರ್ಭದಲ್ಲಿ ಜನತಾದಳ ಜಾತ್ಯಾತೀತ ಕಾರ್ಯಧ್ಯಕ್ಷ ವಾಸುದೇವ ರಾವ್, ಯುವ ಜನತಾದಳ ಅಧ್ಯಕ್ಷ ರೋಹಿತ್ ಕರಂಬಳ್ಳಿ, ರಾಜ್ಯ ನಾಯಕ ರಾದ ಶೇಖರ್ ಕೋಟ್ಯಾನ್, ಗಂಗಾಧರ ಬಿರ್ತಿ ಅಲ್ಲದೇ ರವಿರಾಜ್ ಸಾಲ್ಯಾನ್, ಮುಹಮ್ಮದ್ ರಫೀಕ್, ರಶೀದ್, ಶಂಶುದ್ಧೀನ್,ರಂಗ ಕೋಟ್ಯಾನ್, ಸನವರ್ ಶೇಖ್, ಆರ್.ಎನ್.ಕೋಟ್ಯಾನ್, ಹರಿಣಿ ಹಾಗೂ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

ಸರಕಾರಿ ನೌಕರರ ಸಂಘ: ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್ ಧ್ವಜಾರೋಹಣ ನೆರವೇರಿಸಿದರು. ಉದಯಕುಮಾರ್ ಶೆಟ್ಟಿ, ಪ್ರವೀಣ್ ಕಾಮತ್ ಉಪಸ್ಥಿತರಿದ್ದರು.

ಡಿಎಚ್‌ಓ ಕಚೇರಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡಾ ಧ್ವಜಾ ರೋಹಣ ನೆರವೇರಿಸಿದರು. ಆರ್‌ಸಿಹೆಚ್ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್, ವೆನ್ಲಾಕ್ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ಕೋ ಆರ್ಡಿನೇಟರ್ ಸಜನಿ ಓ.ಕೆ., ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸರಕಾರಿ ನೌಕರರ ವಸತಿ ಗೃಹ:  ಸರಕಾರಿ ನೌಕರರ ವಸತಿ ಗೃಹ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್ ಭಟ್ ಧ್ವಜಾರೋಹಣ ನೆರವೇರಿಸಿದರು. ವಸತಿ ಗೃಹದ ನಿವಾಸಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News