ಗಣರಾಜ್ಯೋತ್ಸವ: ಭಟ್ಕಳದಲ್ಲಿ ಗಮನ ಸೆಳೆದ ಸಿಎಎ, ಎನ್.ಆರ್.ಸಿ ಕೇಕ್ ಗಳು

Update: 2020-01-26 14:21 GMT

ಭಟ್ಕಳ: ಇಲ್ಲಿನ ಮಹಿಳೆಯರು ‘ವಿ ದಿ ಪೀಪಲ್ ಆಫ್ ಇಂಡಿಯಾ’ ಆಂದೋಲನದ ಮೂಲಕ ಗಮನ ಸೆಳೆಯುತ್ತಿದ್ದು, ದಿನಕ್ಕೊಂದು ವಿನೂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

71ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಕೇಕ್ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಸಂವಿಧಾನದ ಮಹತ್ವ, ಎನ್.ಆರ್.ಸಿ, ಸಿಎಎ ಮತ್ತು ಎನ್.ಪಿ.ಆರ್ ಕುರಿತಂತೆ ಜಾಗೃತಿ ಮೂಡಿಸುವ ವಿವಿಧ ಆಕಾರದ ಆಕರ್ಷಕ ಕೇಕ್ ಗಳು ಜನರ ಗಮನ ಸೆಳೆದವು.

ಭಾರತದ ಸಂವಿಧಾನ, ಭಾರತದ ನಕಾಶೆ ಸೇರಿದಂತೆ ವಿವಿಧ ಕೇಕ್‍ಗಳು ಇದ್ದವು.

ಇಲ್ಲಿನ ಮಹಿಳೆಯರು ತುಂಬಾ ಆಸಕ್ತಿ ವಹಿಸಿ ಕೇಕ್ ಗಳನ್ನು ಸಿದ್ಧಗೊಳಿಸಿದ್ದು ನಿಜಕ್ಕೂ ಸಮಾಜಮುಖಿ ಚಿಂತನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಶಂಸನೀಯವಾಗಿದೆ ಎಂದು ‘ವಿ ದ ಪೀಪಲ್ ಆಫ್ ಇಂಡಿಯಾ’ ಭಟ್ಕಳದ ಮಹಿಳಾ ಸಂಚಾಲಕಿ ನಬೀರಾ ಮೊಹತೆಶಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಎನ್.ಆರ್.ಸಿ, ಸಿಎಎ ವಿರುದ್ಧ ಪ್ರಭಲ ಹೋರಾಟಗಳನ್ನು ಮಹಿಳೆಯರು ಮತ್ತು ಪುರುಷರು ಸೇರಿ ನಡೆಸಲಿದ್ದಾರೆ. ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಲು ಇಂದು ಕೇಕ್ ಸ್ಪರ್ಧೆ ಹಾಗೂ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟಗಳನ್ನು ತೀವ್ರಗೊಳಿಸುವ ಅವಶ್ಯಕತೆಯಿದೆ. ಇಂದು ದೇಶದ ಎಲ್ಲ ಸಮುದಾಯಗಳಲ್ಲಿ ಮಹಿಳೆ ಜಾಗೃತಗೊಂಡಿದ್ದಾಳೆ, ಸಂವಿಧಾನದ ರಕ್ಷಣೆಗಾಗಿ ಇಂದು ದೇಶದಾದ್ಯಂತ ಪುರಷರಿಗಿಂತ ಮಹಿಳೆಯರೆ ಮುಂಚೂಣಿಯಲ್ಲಿದ್ದಾರೆ ಇದು ಉತ್ತಮ ಬೆಳೆವಣೆಯಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News