ಮಂಗಳೂರು: ‘ಸ್ನೇಹ ದೀಪ ಮಕ್ಕಳ ಮನೆ’ಯಲ್ಲಿ ಗಣರಾಜ್ಯೋತ್ಸವ

Update: 2020-01-30 03:52 GMT

ಮಂಗಳೂರು, ಜ.26: ನಗರದ ಕೊಟ್ಟಾರ ಬಳಿಯ ಸ್ನೇಹ ದೀಪ ಮಕ್ಕಳ ಮನೆಯಲ್ಲಿ ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ರವಿವಾರ ಮಕ್ಕಳಿಗೆ ಅಗತ್ಯ ವಸ್ತುಗಳು ಮತ್ತು ಸಿಹಿತಿಂಡಿ ವಿತರಿಸಿ, ಮಕ್ಕಳೊಂದಿಗೆ  71ನೆ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ನೇಹ ದೀಪ ಸಂಸ್ಥೆಯ ನಿರ್ದೇಶಕಿ ತಬಸ್ಸುಂ  ಸಂಸ್ಥೆಗೆ ಸಹಕಾರ ನೀಡುತ್ತಿರುವ ಮತ್ತು ಮಕ್ಕಳ ಒಳಿತಿಗಾಗಿ ಪ್ರಾರ್ಥಿಸುತ್ತಿರುವ ಸಂಸ್ಥೆಗಳು ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿ ಗಣರಾಜ್ಯ ದಿನದ ಶುಭಾಶಯ ತಿಳಿಸಿದರು.

ಸಮಾರಂಭದಲ್ಲಿ ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷ ರಿಯಾಝ್ ಅಹಮದ್, ಅತಿಥಿಗಳಾದ ಹಯಾತುಲ್ ಇಸ್ಲಾಂ ಮದ್ರಸ ನಡುಪಳ್ಳಿ ಕುದ್ರೋಳಿ ಇದರ ಅಧ್ಯಾಪಕರಾದ ನೌಷಾದ್ ಅನ್ಸಾರಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ಸಲಹೆಗಾರ ಸುಲೈಮಾನ್ ಶೇಕ್ ಬೆಳುವಾಯಿ, ಪತ್ರಕರ್ತ ಪುಷ್ಪರಾಜ್ ಬಿ.ಎನ್., ವಿಶ್ವಾಸ್ ಕ್ರೌನ್ ಅಪಾರ್ಟ್ ಮೆಂಟ್ ನ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಲಾಯ್ ಫ್ರಾಂಕ್, ಸ್ನೇಹ ದೀಪ ಮಕ್ಕಳ ಮನೆಯ ಸಿಸ್ಟರ್ ಜೆನ್ನಿ ವಿಭಾ ಮೊದಲಾದವರು ಉಪಸ್ಥಿತರಿದ್ದರು.

ಟ್ಯಾಲೆಂಟ್ ಫೌಂಡೇಶನ್ನಿನ ಪ್ರದಾನ ಕಾರ್ಯದರ್ಶಿ  ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ನಕಾಶ್ ಬಾಂಬಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News