ಎಸ್ಕೆಎಸ್ಸೆಸ್ಸೆಫ್ ವತಿಯಿಂದ ವಿಟ್ಲದಲ್ಲಿ ಮಾನವ ಸರಪಳಿ 2020

Update: 2020-01-26 16:32 GMT

ವಿಟ್ಲ: ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಾನವ ಸರಪಳಿ 2020 ಕಾರ್ಯಕ್ರಮ ಒಕ್ಕೆತ್ತೂರಿನಲ್ಲಿ ರವಿವಾರ ನಡೆಯಿತು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಮಾನವ ಸರಪಳಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್- ಖಾಸಿಮಿ ಬಂಬ್ರಾಣ ಮಾತನಾಡಿ, ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದರು. 

ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ ದುಆ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಅಧ್ಯಕ್ಷ ಖಾಸಿಂ ದಾರಿಮಿ ಪ್ರಮಾಣ ವಚನ ಭೋದಿಸಿದರು. 

ಕೇರಳ ಪತ್ತನಾಪುರಮ್ ನ ಸಿರಾಜುದ್ದೀನ್ ಖಾಸಿಮಿ, ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡ್, ಇಕ್ಬಾಲ್ ಬಾಳಿಲ, ಜಿ. ಪಂ ಸದಸ್ಯ ಎಂ.ಎಸ್ ಮುಹಮ್ಮದ್ ಮಾತನಾಡಿದರು. 

ಸಯ್ಯದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ, ಸಯ್ಯದ್ ಅನಸ್ ತಂಙಳ್ ಗಂಡಿಬಾಗಿಲು, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೊಯಿದಿನಬ್ಬ ಹಾಜಿ, ಕಾರ್ಯದರ್ಶಿ ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ, ಮುಫತ್ತಿಸ್ ಹನೀಫ್ ಮುಸ್ಲಿಯಾರ್, ರಶೀದ್ ಹಾಜಿ ಪರ್ಲಡ್ಕ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಕತಾರ್ ಇಬ್ರಾಹಿಂ ಹಾಜಿ, ಮಾಹಿನ್ ದಾರಿಮಿ ಪಾತೂರು, ಶೇಖ್ ಮುಹಮ್ಮದ್ ಇರ್ಫಾನಿ, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಶರೀಫ್ ಮೂಸ ಕುದ್ದುಪದವು, ಅಬ್ದುಲ್ ಕರೀಂ ಕೆಲಿಂಜ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಮಜೀದ್ ದಾರಿಮಿ, ಕೆ.ಎಲ್.  ಉಮರ್ ದಾರಿಮಿ ಪಟ್ಟೋರಿ, ಕೆ.ಎಂ.ಎ ಕೊಡುಂಗಾಯಿ, ವಿ.ಎಸ್.ಇಬ್ರಾಹಿಂ ಒಕ್ಕೆತ್ತೂರು, ಅಬ್ಬಾಸ್ ದಾರಿಮಿ ಕೆಲಿಂಜ , ಅಶ್ರಫ್ ಶೇಡಿಗುಂಡಿ, ಸಯ್ಯದ್ ಇಸ್ಮಾಯಿಲ್ ತಂಙಲ್ ಉಪ್ಪಿನಂಗಡಿ, ಮುಸ್ತಫಾ ಕಟ್ಟದಪಡ್ಪು, ಆಸಿಫ್ ಕಬಕ, ಉಬೈದ್ ವಿಟ್ಲ ಸಮೀರ್ ಪಳಿಕೆ, ತಬೂಕ್ ದಾರಿಮಿ, ಹಾರೂನ್ ರಶೀದ್ ಬಂಟ್ವಾಳ, ಎಂ.ಎಸ್.ಹಮೀದ್ ಪರಿಯಾಲ್ತಡ್ಕ, ಅಝೀಝ್ ಮಲೀಕ್ ಮೂಡಬಿದ್ರೆ, ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್, ಯು.ಹೆಚ್. ಅಬೂಬಕ್ಕರ್ ಬೆಳ್ಳಾರೆ, ಶಾಫಿ ದಾರಿಮಿ ಅಜ್ಜಾವರ, ಮಜೀದ್ ಫೈಝಿ ನಂದಾವರ,  ಅಬ್ದುಲ್ ಖಾದರ್ ಹಾಜಿ ಒಯಂಬಾಡಿ ಮೊದಲಾದವರು ಉಪಸ್ಥಿತರಿದ್ದರು. 

ಸ್ವಾಗತ ಸಮಿತಿ ಕನ್ವೀನರ್ ಇಬ್ರಾಹಿಂ ಕಡವ ಸ್ವಾಗತಿಸಿದರು.

ರಶೀದ್ ರಹ್ಮಾನಿ ಕರಾಯ ನಿರ್ಣಯ ಮಂಡಿಸಿದರು. ಸಮೀತ್ ಸಫ್ವಾನ್ ಬೋಳಂತೂರು ಕಿರಾಅತ್ ಪಠಿಸಿದರು. ಪಿ.ಎ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು. 

ಸಮಾವೇಶದ ನಿರ್ಣಯಗಳು

1.  2019 ಡಿಸೆಂಬರ್ 19ರಂದು  ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಮೃತಪಟ್ಟ ಜಲೀಲ್ ಮತ್ತು ನೌಶೀನ್ ರಿಗೆ ನ್ಯಾಯ ಒದಗಿಸಲು ಗಲಭೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

2. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸಮಾಜದ ಸ್ವಾಸ್ಥವನ್ನು ಕೆಡಿಸುವಂತಹ ಮಸೀದಿಗಳು ಗೂಂಡಾಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೇಖರಿಸಿಡುವ ಕೇಂದ್ರಗಳು ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುತ್ತದೆ.

3. ಅಪರಾಧಿಗಳನ್ನು ಜಾತಿ ಆಧಾರದಲ್ಲಿ ವರ್ಗೀಕರಣ ಮಾಡುವ ಕೀಳು ಮಟ್ಟದ ಮನೋಭಾವವು ಕೊನೆಯಾಗಬೇಕು.

4. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಕ್ಕೆ ಪ್ರಯತ್ನಿಸಿದ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಶ್ರಮಿಸುವ ಎಲ್ಲಾ ಶಕ್ತಿಗಳನ್ನು ಖಂಡಿಸುತ್ತದೆ. ಮಾತ್ರವಲ್ಲದೆ ಇಂತಹ ಪ್ರಯತ್ನಗಳು ಅಪರಾಧಿಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಈ ಸಭೆಯು ಅಭಿಪ್ರಾಯ ಪಡುತ್ತದೆ.

5. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಜಾತಿ ಆಧಾರಿತ ಪೌರತ್ವ ಕಾಯ್ದೆಯನ್ನು ಖಂಡಿಸುತ್ತದೆ ಮತ್ತು ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News