ವಾಸಂತಿ ಅಂಬಲಪಾಡಿಯ ‘ಉಯ್ಯಾಲೆ’ ಕಥಾಸಂಕಲನ ಬಿಡುಗಡೆ

Update: 2020-01-26 16:42 GMT

ಉಡುಪಿ, ಜ.26: ಒಂದು ಪುಸ್ತಕ ನೋಡುವವರ ಕಣ್ಣಿನ ಮೇಲೆ ಮತ್ತು ಓದುವವರ ಮನಸ್ಸಿನ ಮೇಲೆ ಹೊಂದಿಕೊಂಡಿರುತ್ತದೆ. ಓದುವುದು, ಬರೆ ಯುವುದು ಸುಲಭದ ಕೆಲಸವಲ್ಲ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದ್ದಾರೆ.

ಕ್ಷಿಪ್ರ-ಪದ್ಮ ಪ್ರಕಾಶನದ ವತಿಯಿಂದ ಅಂಬಲಪಾಡಿ ದೇವಸ್ಥಾನದ ಶ್ರೀಭವಾನಿ ಮಂಟಪದಲ್ಲಿ ಜ.25ರಂದು ವಾಸಂತಿ ಅಂಬಲಪಾಡಿ ಬರೆದ ‘ಉಯ್ಯಾಲೆ’ ಕಥಾಸಂಕಲನ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶೋಕಾಮಾತಾ ಚರ್ಚಿನ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸಾ ಮಾತನಾಡಿ, ದಿನನಿತ್ಯ ಜೀವನದಲ್ಲಿ ನಡೆ ಯುವ ವಾಸ್ತವಿಕ ವಿಷಯಗಳನ್ನು ಆರಿಸಿ ಬರೆದರೆ ಅದನ್ನು ಕಥೆಯಾಗಿಸ ಬಹುದು ಎಂದು ಅಭಿಪ್ರಾಯಪಟ್ಟರು.

ಮಣಿಪಾಲ ಮೀಡಿಯ ನೆಟ್‌ವರ್ಕ್‌ನ ಹಣಕಾಸು ವಿಭಾಗದ ಮಹಾ ಪ್ರಬಂಧಕ ಸುದರ್ಶನ್ ಶೇರಿಗಾರ, ಕಿದಿಯೂರು ಉದಯಕುಮಾರ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಉದಯಕುಮಾರ ಶೆಟ್ಟಿ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ದೊಡ್ಡಣಗುಡ್ಡೆ ಬಿಲ್ಲವ ಸೇವಾಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ ಪೂಜಾರಿ, ಬೇಬಿ ಜತ್ತನ್, ಪದ್ಮಪ್ರಸಾದ ಉಪಸ್ಥಿತ ರಿದ್ದರು.

ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಕಾಲೇಜಿನ ಉಪನ್ಯಾಸಕಿ ಸೌಮ್ಯಲತಾ ಕೃತಿ ಪರಿಚಯ ಮಾಡಿದರು. ಉಪನ್ಯಾಸಕಿ ಪ್ರೀಮ ಹೆಲ್ವಿನ್ ಡಿಸೋಜ ಸ್ವಾಗತಿಸಿದರು. ಲೇಖಕಿ ವಾಸಂತಿ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಅನಿತಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಕ್ಷಿಪ್ರ ಪ್ರಸಾದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News