ಎಸ್‌ಕೆಪಿಎ ಉಡುಪಿ ವಲಯದ ಪದಾಧಿಕಾರಿಗಳ ಪದಗ್ರಹಣ

Update: 2020-01-26 16:47 GMT

ಉಡುಪಿ, ಜ.26: ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಹಾಗೂ ಸಭೆ ಸಮಾರಂಭಗಳ ದಾಖಲೀಕರಣದಲ್ಲಿ ಛಾಯಾಗ್ರಹಣ ಅತಿ ಪ್ರಾಮುಖ್ಯತೆ ಯನ್ನು ಪಡೆಯುತ್ತದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಇತ್ತೀಚೆಗೆ ನಡೆದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಷಿಯೇಶನ್ ಉಡುಪಿ ವಲಯದ ಪದ ಪ್ರದಾನ ಮತ್ತು 26ನೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಮಾತನಾಡಿ, ಶಿಸ್ತು ಬದ್ದವಾಗಿ ನಮ್ಮ ವೃತ್ತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ನಾವು ಬೆಳೆಯುವುದರೊಂದಿಗೆ ನಮ್ಮ ಸಂಘಟನೆಯು ಬೆಳೆಯಲು ಸಾಧ್ಯವಾಗುತ್ತದೆ. ನಾವು ಸಂಘಟಿತರಾಗಿ ಕಾರ್ಯ ಪ್ರವೃತ್ತರಾದರೆ ನಮ್ಮ ಬೇಡಿಕೆಗಳನ್ನು ಸರಕಾರ ಮಟ್ಟದಲ್ಲಿ ಪೂರೈಸಿಕೊಳ್ಳಲು ಸುಲಭವಾಗುತ್ತದೆ ಎಂದರು.

ಮನೆ ಕಟ್ಟಲು, ಬಡ ಹೆಣ್ಣಿನ ಮದುವೆಗೆ ಸಹಾಯಧನ, ಕಲಿಕಾ ಪ್ರೋತ್ಸಾಹ ಧನ, ಕನ್ನಡ ಮಾಧ್ಯಮ ಶಾಲೆಗೆ ಕ್ರೀಡಾಪರಿಕರಕ್ಕೆ ಸಹಾಯಧನ ವಿತರಿಸ ಲಾಯಿತು. ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಮಾಜಿ ಜಿಲ್ಲಾ ಪಧಾಧಿಕಾರಿಗಳನ್ನು ಹಾಗು ವಲಯದ ಹಿರಿಯ ಸದಸ್ಯರಾದ ವಸಂತ್ ಉದ್ಯಾವರ ಮತ್ತು ಜಯಕರ್ ಕುಕ್ಕಿಕಟ್ಟೆ ಅವರನ್ನು ಸನ್ಮಾನಿಸಲಾಯಿತು. ವಲಯದ ಛಾಯಾಗ್ರಾಹಕರಿಗೆ ಏರ್ಪಡಿಸಿದ್ದ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಸ್ಪರ್ಧೆಯಲ್ಲಿ ವಿಜೇತರಾದ ಛಾಯಾಗ್ರಾಹಕರನ್ನು ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಎಸ್‌ಕೆಪಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್, ಎಸ್ಕೆಪಿಎ ಸಲಹಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನೂತನ ಅಧ್ಯಕ್ಷ ಪ್ರಕಾಶ್ ಕೊಡಂಕೂರ್, ಕೇಂದ್ರ ಸಮಿತಿ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ, ಉದ್ಯಮಿ ಜಿತೇಶ್ ಕಿದಿಯೂರ್, ಫೋಟೋ ಪ್ಯಾಲೇಸ್ನ ಅನಿಲ್ ಶೆಟ್ಟಿ, ಬೇಬಿ ಶೇರಿಗಾರ್ತಿ, ವಲಯದ ಗೌರವಾಧ್ಯಕ್ಷ ಶಿವ ಕೆ.ಅಮೀನ್, ನಿಕಟ ಪೂರ್ವ ಗೌರಾವಾಧ್ಯಕ್ಷ ರಂಜನ್ ಕುಮಾರ್, ಕೋಶಾಧಿಕಾರಿ ಮಂಜುನಾಥ ಶೇರಿಗಾರ್, ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ಅನಿಶ್ ಶೆಟ್ಟಿಗಾರ್ ಸ್ವಾಗತಿಸಿದರು. ದಿವಾಕರ್ ಹಿರಿಯಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಶೇರಿಗಾರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಕೇಶ್ ಕೆ.ಅಮೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News