ಮಂಗಳೂರು: ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಫಲಿತಾಂಶ

Update: 2020-01-26 17:07 GMT

ಮಂಗಳೂರು, ಜ.26: ನಗರದ ರಾಷ್ಟ್ರೀಯ ಹೆದ್ದಾರಿ 66ರ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ಹೊನಲು-ಬೆಳಕಿನ ಮೂರನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ರವಿವಾರ ಸಮಾರೋಪಗೊಂಡಿದ್ದು, ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟಗೊಂಡಿದೆ.

ಫಲಿತಾಂಶ ವಿವರ:

ಕನೆಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಬೇಲಾಡಿ ಬಾವ ಅಶೋಕ್ ಶೆಟ್ಟಿ. ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್, ಬಾರ್ಕೂರು ಶಾಂತಾರಾಮ ಶೆಟ್ಟಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್.
ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ, ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟಿ್ಟ. ಹಲಗೆ ಮುಟ್ಟಿದವರು: ಪಣಪಿಲ ರಾಜವರ್ಮ ಮುದ್ಯ.
ಹಗ್ಗ ಹಿರಿಯ: ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್. ಶೆಟ್ಟಿ (ಬಿ). ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ (ಎ). ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ.
ಹಗ್ಗ ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (ಎ), ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ: ಜಪ್ಪು ಮನ್ಕುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ (ಎ). ಓಡಿಸಿದವರು: ಮರೋಡಿ ಶ್ರೀಧರ್.
ನೇಗಿಲು ಹಿರಿಯ: ಪ್ರಥಮ- ಇರುವೈಲು ಪಾನಿಲ ಬಾಡ ಪೂಜಾರಿ (ಎ). ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ(ಬಿ). ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ.
ನೇಗಿಲು ಕಿರಿಯ: ಪ್ರಥಮ- ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್, ದ್ವಿತೀಯ: ಗುರುಪುರ ಬಡಕೆರೆ ಗುತ್ತು ಸಚಿನ್ ಅಡಪ. ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ.
ಕಂಬಳ ಕೂಟದಲ್ಲಿ ಒಟ್ಟು 116 ಜತೆ ಕೋಣಗಳು ಭಾಗವಹಿಸಿದ್ದವು. ಇದರಲ್ಲಿ ಕನೆಹಲಗೆ: 4, ಅಡ್ಡಹಲಗೆ 5, ಹಗ್ಗ ಹಿರಿಯ 16, ನೇಗಿಲು ಹಿರಿಯ 20, ಹಗ್ಗ ಕಿರಿಯ 14, ನೇಗಿಲು ಕಿರಿಯ: 56 ಜತೆ ಕೋಣಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News