ಸಂವಿಧಾನದ ಒಳಗೊಂದು ಸಂವಿಧಾನ ಆತಂಕಕಾರಿ: ಜಯನ್ ಮಲ್ಪೆ

Update: 2020-01-26 17:36 GMT

ಉಡುಪಿ, ಜ.26: ನಮ್ಮನ್ನು ಆಳುವ ವರ್ಗ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳ ನೆಲೆಗಟ್ಟಿನಲ್ಲಿ ಹೊಸ ದಾರಿಯಲ್ಲಿ ನಡೆಯಲು ಮಾರ್ಗವನ್ನರಿಸಿದ ಭಾರತದ ಸಂವಿಧಾನದ ಒಳಗೊಂದು ಸಂವಿಧಾನ ರೂಪಿಸುತ್ತಿರುವುದು ಆತಂಕಕಾರಿ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಇಂದು ನಡೆದ 71 ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಳೆದ ಹಲವು ದಶಕಗಳಿಂದ ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದು ವರೆದಿರುತ್ತಿದೆ. ಇಂದಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನಿಷ್ಯನಿಗೆ ಒಂದು ವೌಲ್ಯವೆಂಬ ತತ್ವವನ್ನು ನಿರಾಕರಿಸುತ್ತಿರುತ್ತೇವೆ. ಆದುದರಿಂದ ಕಳೆದ 71ವರ್ಷಗಳಲ್ಲಿ ನಮ್ಮನ್ನು ಆಳಿದವರು ಯಾರ ಉದ್ಧಾರ ಮಾಡಿದ್ದಾರೆ ಮತ್ತು ನಮ್ಮ ಸಂವಿಧಾನದ ಆಶಯವನ್ನು ಈಡೇರಿಸಿದ್ದಾರೆಯೇ ಎಂದು ಯೋಚಿಸಬೇಕಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ದಲಿತ ನಾಯಕ ಗಣೇಶ್ ನೆರ್ಗಿ ಮಾತನಾಡಿದರು.

ದಲಿತ ಮುಂದಾಳು ಇಂಜಿನಿಯರ್ ರಮೇಶ್ ಪಾಲ್, ಮಂಜುನಾಥ ಕಪ್ಪೆಟ್ಟು, ಗುಣವಂತ ತೊಟ್ಟಂ, ಭವನ್‌ದಾಸ್, ಸತೀಶ್ ಕಪ್ಪೆಟ್ಟು, ಅಣ್ಣಪ್ಪ ವರಂಗ, ರಮೋಜಿ ಮಲ್ಪೆ, ಸಂತೋಷ ಕಪ್ಪೆಟ್ಟು, ದೀಪಕ್ ಜಿ.ಕೊಡವೂರು, ಪ್ರಸಾದ್ ಮಲ್ಪೆ, ದಿನೇಶ್ ಮೂಡುಬೆಟ್ಟು, ರಾಜೇಶ್ ತಮ್ಮನಕುದ್ರು, ದಿಲೀಪ್ ಮಲ್ಪೆ, ಮಹೇಶ್, ಸುಶೀಲ್, ಅರುಣ್ ಸಾಲ್ಯಾನ್, ಶಶಿಕಲಾ ತೊಟ್ಟಂ, ಪ್ರಬಾವತಿ, ನಿರ್ಮಾಲ, ಕಲಾವತಿ, ನಮೃತ, ವನಿತಾ, ವೀಣಾ ನೆರ್ಗಿ, ಜಲಜ, ಯಶೋದ, ಶಾಂತ ಮೊದಲಾದವರು ಉಪಸ್ಥಿತರಿದ್ದರು,

ಜಯರಾಜ್ ಸ್ವಾಗತಿಸಿದರು. ಮಲ್ಲಿಕಾರ್ಜುನ ವರಂಗ ವಂದಿಸಿದರು. ಅರುಣ್ ಕುಕ್ಕುಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News