ವಿಟ್ಲ: ಹೊರೈಝನ್ ಶಾಲೆಯಲ್ಲಿ ಗಣರಾಜ್ಯೋತ್ಸವ

Update: 2020-01-26 17:39 GMT

‌ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭ ವಿಧ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ ಧ್ವಜಾರೋಹಣ ಮಾಡಿದರು.ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಂಚಾಲಕ ನೋಟರಿ ಅಬೂಬಕರ್, ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆಕಾರ್ಯದರ್ಶಿ ಹನೀಫ್ ಎಂ.ಎ.,ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ,ಝುಬೈರ್ ಮಾಸ್ಟರ್, ಮುಖ್ಯ ಶಿಕ್ಷಕ ಡಾ.ಪಿ.ಎಚ್.ಹಮೀದ್, ಪಿ.ಎಚ್. ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು.

ವಿದ್ಯಾರ್ಥಿಗಳಾದ ರಿದಾ ಸ್ವಾಗತಿಸಿ, ಸನಾ ವಂದಿಸಿದರು. ತಫ್ಶೀರಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News