​ಕರಾವಳಿಗೆ ಪದ್ಮ ಪ್ರಶಸ್ತಿ: ಶಾಸಕ ಕಾಮತ್ ಹರ್ಷ

Update: 2020-01-26 18:37 GMT

ಮಂಗಳೂರು, ಜ.26: ಪ್ರಸಕ್ತ 2020ನೇ ಸಾಲಿನ ಪದ್ಮ ಪ್ರಶಸ್ತಿಗಳಲ್ಲಿ ಕರಾವಳಿಯ ಮೂವರು ಸಾಧಕರನ್ನು ಗುರುತಿಸಿ ಗೌರವಿಸಿದ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀ ಹಾಗೂ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿ ಕರಾವಳಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಸಾಧನೆಯಿಂದ ಕರಾವಳಿಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದಿದ್ದಾರೆ.

ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದ ಗಟ್ಟಿಧ್ವನಿಯಾಗಿದ್ದ ಪೇಜಾವರ ಶ್ರೀಗಳು, ಕಿತ್ತಳೆ ಹಣ್ಣು ವ್ಯಾಪಾರದಿಂದ ಅಕ್ಷರ ದೇಗುಲ ನಿರ್ಮಿಸಿದ ಹಾಜಬ್ಬ ಹಾಗೂ ಸಾಧಾರಣ ವ್ಯಕ್ತಿಯಿಂದ ಈ ದೇಶದ ರಕ್ಷಣಾ ಸಚಿವನಾಗಿ ಸಾಧಸಿದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಪ್ರಶಸ್ತಿ ದೊರಕಿರುವುದು ಅತ್ಯಂತ ಹರ್ಷ ತಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News