ಕುಂಜತ್ಕಳದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2020-01-27 05:44 GMT

ಫರಂಗಿಪೇಟೆ, ಜ.27: ಕುಂಜತ್ಕಳ ನೂರುಲ್ ಹುದಾ ಮದ್ರಸ ಮತ್ತು ಮಸೀದಿಯ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಏಕದಿನ ಮತ ಪ್ರವಚನ ಕಾರ್ಯಕ್ರಮವು ಕುಂಜತ್ಕಳ ಮೈದಾನದ ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ರವಿವಾರ ರಾತ್ರಿ ನಡೆಯಿತು.

 ಮುಖ್ಯ ಭಾಷಣ ಮಾಡಿದ ಹಾಫಿಲ್ ಸಿರಾಜುದ್ದೀನ್ ಖಾಸಿಮಿ, ದೇಶಕ್ಕಾಗಿ ಬಲಿದಾನ ಮಾಡಿದ ಪರಂಪರೆಯ ಇರುವ ಮುಸ್ಲಿಮರ ಪೌರತ್ವ ಇಂದು ಪ್ರಶ್ನಿಸಲ್ಪಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರ ನಡುವೆ ಭೀತಿ ಗೊಂದಲ ಸೃಷ್ಟಿಸಲಾಗಿದೆ. ಆದರೆ ಅಲ್ಲಾಹನನ್ನು ಭಯಪಟ್ಟರೆ ಬೇರೆ ಯಾವುದೇ ಶಕ್ತಿಗೆ ಭಯಪಡುವ ಅವಶ್ಯಕತೆ ಇಲ್ಲ. ಅಲ್ಲಾಹು ಇಚ್ಛಿಸಿದರೆ ಒಳಿತನ್ನು ಕರುಣಿಸಬಹುದು ಎಂದು ಹೇಳಿದರು

ಸೈಯದ್ ಸಮೀರ್ ಅಲಿ ಶಿಹಾಬ್ ತಂಙಳ್ ದುಆಗೈದು ಮಾತನಾಡಿದರು.

ನೂರುಲ್ ಹುದಾ ಮದ್ರಸದ ಅಧ್ಯಕ್ಷ ಯು.ಎಚ್.ಅಶ್ರಫ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಪ್ರಾಸ್ತಾವಿಕ ಮಾತನಾಡಿದರು,

ಕಲ್ಲೇಗ ಮಸೀದಿ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ ದಿಕ್ಸೂಚಿ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಯು.ಟಿ.ಖಾದರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ಟಿ.ಕೆ. ಎಂಟರ್ ಪ್ರೈಸಸ್ ಮಾಲಕರು ಬಶೀರ್, ನೂರುಲ್ ಹುದಾ ಮದ್ರಸದ ಉಪಾಧ್ಯಕ್ಷ ಮುಹಮ್ಮದ್ ಹನೀಫ್, ಅರಫಾ ಗ್ರೂಪ್ ನ ಅಬ್ದುಲ್ಲತೀಫ್, ನಷಾತುದ್ದೀನ್ ಯಂಗ್ ಫೆಡರೇಶನ್ ಅಧ್ಯಕ್ಷ ಹಾಗೂ ಪುದು ಗ್ರಾಪಂ ಸದಸ್ಯ ಅಬೂಬಕರ್ ನಝೀರ್, ಕೆಇಎಲ್ ಇಸ್ಮಾಯೀಲ್, ಅಷ್ಫಾಕ್ ಕುದ್ರೋಳಿ ಎಎಸ್ಆರ್, ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯ ಅಧ್ಯಕ್ಷ ಮಾಲಿಕ್ ಅಝೀಝ್, ಅಡ್ಯಾರ್ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಖಲಂದರ್ ಶಾಫಿ ನಂದಾವರ, ಅಬ್ದುಲ್ ಹಮೀದ್ ನಂದಾವರ, ಎನ್ಎಚ್ಎಂ ಕುಂಜತ್ಕಳ ಸಲೀಮ್ ಮುಸ್ಲಿಯಾರ್, ಮಾರಿಪ್ಪಳ್ಳ ಮಸೀದಿಯ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಅಮೆಮ್ಮಾರ್ ಮಸೀದಿ ಖತೀಬ್ ಅಬ್ದುಲ್ಲತೀಫ್ ಹನೀಫಿ, ಹತ್ತನೇ ಮೈಲ್ ಕಲ್ಲು ಮಸೀದಿ ಖತೀಬ್ ಅಬ್ದುರ್ರಶೀದ್ ಫೈಝಿ, ಕುಂಪನಮಜಲ್ ಖತೀಬ್ ಉಬೈದುಲ್ಲಾ ಅಝ್ಹರಿ, ಪೇರಿಮಾರ್ ಮಸೀದಿಯ ಖತೀಬ್ ಮುಹಮ್ಮದ್ ರಫೀಕ್ ಸಅದಿಯ್ಯ, ಸುಜೀರ್ ಮಲ್ಲಿ ಮಸೀದಿಯ ಖತೀಬ್ ರಿಯಾಝ್ ದಾರಿಮಿ, ಮುಸ್ತಫ ಮೇಲ್ಮನೆ ಎಂಎನ್ಟಿ, ಟಿ.ಆರ್.ಎಫ್. ಪ್ರ, ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಅಡ್ಯಾರ್ ಕಣ್ಣೂರು ಮಸೀದಿಯ ಅಧ್ಯಕ್ಷ ಕೆ.ಎಸ್.ಹಮೀದ್ ಹಾಜಿ, ನಸೀಮಾ ಬೀಡಿ ಮಾಲಕ ಅಬ್ದುರ್ರಹ್ಮಾನ್, ಅಮೆಮ್ಮಾರ್ ಮಸೀದಿಯ ಅಧ್ಯಕ್ಷ ಉಮರಬ್ಬ, ಹತ್ತನೇ ಮೈಲ್ ಕಲ್ಲು ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ, ಕುಂಪನಮಜಲು ಮಸೀದಿಯ ಅಧ್ಯಕ್ಷ ಬುಖಾರಿ, ಮೌಲ ಮಸ್ಜಿದ್ ಉಪಾಧ್ಯಕ್ಷ ಇಸ್ಮಾಯೀಲ್, ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಹುಸೈನ್ ಶಬೀರ್ ಹತ್ತನೆಮೈಲ್ ಕಲ್ಲು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.

ಮದ್ರಸದ ಸದರ್ ಮುಅಲ್ಲಿಂ ಅಬೂಬಕರ್ ಫೈಝಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News