ಜ.30-ಫೆ.1: ಅಲೋಶಿಯಸ್‌ನಲ್ಲಿ ಅಲೋಶಿಯಸ್ ಫೆಸ್ಟ್

Update: 2020-01-27 10:30 GMT

ಮಂಗಳೂರು, ಜ.27: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಜ.30ರಿಂದ ಫೆ.1ರವರೆಗೆ ಮೂರು ದಿನಗಳ ಕಾಲ ಅಲೋಶಿಯಸ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ

ಕಾಲೇಜಿನ ಮದರ್ ಥೆರೆಸಾ ಶಾಂತಿ ಉದ್ಯಾನವನದಲ್ಲಿ ಜ.30ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಡೇನೀಶಿಯಸ್ ವಾಝ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಲೋಶಿಯಸ್ ಫೆಸ್ಟ್‌ನಲ್ಲಿ ನಾಡಿನ ಎಲ್ಲೆಡೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಅಲೋಸಿಯಸ್ ಫೆಸ್ಟ್ ಒಂದು ವೈವಿಧ್ಯಮಯವಾದ ಕಾರ್ಯಕ್ರಮವಾಗಿದೆ. ಈ ಹಬ್ಬದಲ್ಲಿ ಆರ್ಟ್ ಬೀಟ್, ಇಂಪ್ರಿಂಟ್ಸ್ ಸ್ಪಿನ್ ಔಟ್, ಆಕ್ಮೆ, ಕಾಂಪೊಸಿಟ್, ಅಲೋಶಿಯಾಡ್ ಮತ್ತು ಅಸ್ತಿತ್ವ ಎಂಬ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಡಾ.ಪ್ರವೀಣ್ ಮಾರ್ಟಿಸ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಡಾ.ರತನ್ ತಿಲಕ್ ಮೊಹಂತ, ಡಾ.ಈಶ್ವರ ಭಟ್, ವಿದ್ಯಾರ್ಥಿ ನಾಯಕ ಲಾಯ್ಡಾ ವಿನೀತ್ ಸಿಕ್ವೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಕಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News