ಅಮೆರಿಕಾದ 30 ನಗರಗಳಲ್ಲಿ ಸಿಎಎ ವಿರೋಧಿಸಿ ಭಾರತೀಯ-ಅಮೆರಿಕನ್ನರಿಂದ ಪ್ರತಿಭಟನೆ

Update: 2020-01-27 10:51 GMT
Twitter: @IndianAmerican6

ವಾಷಿಂಗ್ಟನ್: ಭಾರತದ 71ನೇ ಗಣರಾಜ್ಯೋತ್ಸವ ದಿನ ಅಮೆರಿಕಾದ ಕನಿಷ್ಠ 30 ನಗರಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಲ್ಲಿನ ಭಾರತೀಯ-ಅಮೆರಿಕನ್ನರು ಶಾಂತಿಯುತ ಪ್ರತಿಭಟನೆ ಹಾಗೂ ಮೆರವಣಿಗೆಗಳನ್ನು ನಡೆಸಿದ್ದಾರೆ.

ಇದೇ ಸಂದರ್ಭ ಸಿಎಎ ಪರವಾಗಿಯೂ ಕೆಲವರು  ಕಾರ್ಯಕ್ರಮ ನಡೆಸಿ "ಭಾರತ ತನ್ನ ನೆರೆಯ ದೇಶಗಳ ಬಗ್ಗೆ ಕಾಳಜಿ ಹೊಂದಿದೆ ಹಾಗೂ ಸಿಎಎ ಭಾರತೀಯ ನಾಗರಿಕರನ್ನು ಬಾಧಿಸದು'' ಎಂದಿದ್ದಾರೆ.

ಪ್ರಮುಖವಾಗಿ ನ್ಯೂಯಾರ್ಕ್, ಚಿಕಾಗೋ, ಹೌಸ್ಟನ್, ಅಟ್ಲಾಂಟ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ನಡೆದಿವೆ.

ವಾಷಿಂಗ್ಟನ್‍ ನಲ್ಲಿ 500ಕ್ಕೂ ಅಧಿಕ ಭಾರತೀಯ ಅಮೆರಿಕನ್ನರು  ಶ್ವೇತ ಭವನ ಸಮೀಪದ ಪಾರ್ಕ್‍ನಿಂದ ಭಾರತೀಯ ದೂತಾವಾಸ ಕಚೇರಿ ಸಮೀಪದ ಗಾಂಧಿ ಪ್ರತಿಮೆ ತನಕ ಮೆರವಣಿಗೆ ನಡೆಸಿದರು.

ಪ್ರತಿಭಟನೆಗಳನ್ನು ಇತ್ತೀಚೆಗೆ ರಚಿಸಲಾದ ಕೋಲಿಶನ್ ಟು ಸ್ಟಾಪ್ ಜೆನೊಸೈಡ್ ಆಯೋಜಿಸಿತ್ತು. ಈ ಸಂಸ್ಥೆಯಲ್ಲಿ  ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್, ಇಕ್ವಾಲಿಟಿ ಲ್ಯಾಬ್ಸ್, ಬ್ಲ್ಯಾಕ್ ಲೈವ್ಸ್ ಮ್ಯಾಟರ್, ಜುವಿಶ್ ವಾಯ್ಸ್ ಫಾರ್ ಪೀಸ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News