ಅಹ್ಮದಾಬಾದ್ ಕೈ ತಪ್ಪಿದ 2020ರ ಐಪಿಎಲ್ ಫೈನಲ್ ಆತಿಥ್ಯ

Update: 2020-01-27 18:25 GMT

ಹೊಸದಿಲ್ಲಿ, ಜ.27: ಅಹ್ಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಸರ್ದಾರ್ ಪಟೇಲ್ ಸ್ಟೇಡಿಯಂ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಫೈನಲ್ ಪಂದ್ಯದ ಆತಿಥ್ಯವಹಿಸುವ ಸ್ಟೇಡಿಯಂಗಳ ಪೈಕಿ ಮುಂಚೂಣಿಯಲ್ಲಿತ್ತು. ಆದರೆ, ಅಹ್ಮದಾಬಾದ್‌ನಲ್ಲಿ ಐಪಿಎಲ್ ಫೈನಲ್ ನಡೆಯವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.

 ಏಶ್ಯ ಇಲೆವೆನ್ ಹಾಗೂ ವರ್ಲ್ಡ್ ಇಲೆವೆನ್ ನಡುವಿನ ಪಂದ್ಯವನ್ನು ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆಯೋಜಿಸಲು ಈ ಹಿಂದೆ ಯೋಜಿಸಲಾಗಿತ್ತು. ಇದೀಗ ಆ ಯೋಜನೆಯನ್ನು ಕೈಬಿಡಲಾಗಿದೆ. ಪಂದ್ಯ ನಡೆಯುವ ಮಾರ್ಚ್ ತಿಂಗಳ ವೇಳೆಗೆ ಸ್ಟೇಡಿಯಂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿರುವುದೇ ಇದಕ್ಕೆ ಕಾರಣ.

 ಕಳೆದ ಬಾರಿಯ ಐಪಿಎಲ್ ವಿಜೇತ ತಂಡ ಮೊದಲ ಪಂದ್ಯ ಹಾಗೂ ಫೈನಲ್ ಪಂದ್ಯ ಆಯೋಜಿಸುವ ಪದ್ಧ್ದತಿ ಐಪಿಎಲ್‌ನಲ್ಲಿ ಜಾರಿಯಲ್ಲಿದೆ. ಹೀಗಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ನ ತವರು ಮೈದಾನ ಮುಂಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News