ಗಂಗೊಳ್ಳಿಯ ಮೊಮಿನ್ ಮೊಹಮ್ಮದ್ ಗೌಸ್ ನಿಧನ

Update: 2020-01-28 09:09 GMT

ಗಂಗೊಳ್ಳಿ, ಜ.28: ಗಂಗೊಳ್ಳಿ ಅಂಚೆ ಕಚೇರಿ ಬಳಿಯ ನಿವಾಸಿ, ಸಾಮಾಜಿಕ ಧುರೀಣ ಮೊಮಿನ್ ಮೊಹಮ್ಮದ್ ಗೌಸ್ ಸಾಹೇಬ್ (78) ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಇವರು ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಗಂಗೊಳ್ಳಿ ಮೋಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದರು. ಕೊಡುಗೈದಾಣಿಯಾಗಿದ್ದ ಇವರು, ಗಂಗೊಳ್ಳಿಯ ಮುಸ್ಲಿಂ ಹೆಣ್ಣುಮಕ್ಕಳ ಮದರಸ ಜಾಮಿಯಾ ಫಾತಿಮತ್ ಝೋಹರ ಇಸ್ಲಾಹುಲ್ ಬನಾತ್ ಇದರ ಸಂಚಾಲಕ ಹಾಗೂ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದರು.

ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ಗಂಗೊಳ್ಳಿಯ ಜಾಮಿಯಾ ಫಾತಿಮತ್ ಝೋಹರ ಮದ್ರಸಕ್ಕೆ ರಜೆ ನೀಡಲಾಗಿದೆ.

ಮೃತರ ಜನಾಝ ನಮಾಝ್ ಇಂದು ರಾತ್ರಿ ಇಶಾ ನಮಾಝ್ ಬಳಿಕ ಮೋಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಲಿದ್ದು, ತದನಂತರ ಗಂಗೊಳ್ಳಿಯ ಕೇಂದ್ರ ಜುಮಾ ಮಸೀದಿಯ ಕಬರಸ್ಥಾನದಲ್ಲಿ ಅಂತಿಮ ಕಾರ್ಯ ನಡೆಯಲಿದೆ ಎಂದು ಕಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News