ಮನೆಯಲ್ಲೇ ಇರುವಂತೆ ವುಹಾನ್ ನಿವಾಸಿಗಳಿಗೆ ಸೂಚನೆ

Update: 2020-01-28 15:53 GMT

ವುಹಾನ್, ಜ. 28: ಸೋಂಕು ಮೊದಲು ಕಾಣಿಸಿಕೊಂಡಿರುವ ವುಹಾನ್ ನಗರವು ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿದೆ. ಇದು ಹುಬೈ ಪ್ರಾಂತದ ಬೀಗಮುದ್ರೆಯಲ್ಲಿರುವ ಅತಿ ದೊಡ್ಡ ನಗರವಾಗಿದೆ. ಇಲ್ಲಿನ 1.1 ಕೋಟಿ ನಿವಾಸಿಗಳ ಎಲ್ಲ ಪ್ರಯಾಣಗಳನ್ನು ಸರಕಾರ ಸ್ಥಗಿತಗೊಳಿಸಿದೆ.

ಮನೆಯಲ್ಲೇ ಇರುವಂತೆ ವುಹಾನ್ ನಗರದ ನಿವಾಸಿಗಳಿಗೆ ಸೂಚಿಸಲಾಗಿದೆ. ನಗರದ ಮಧ್ಯ ಭಾಗದಲ್ಲಿ ಕಾರುಗಳ ಸಂಚಾರವನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.

ಸಮೀಪದ ನಗರಗಳಲ್ಲೂ ಇಂಥದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರನ್ನು ಪ್ರತ್ಯೇಕಿಸಲಾಗಿದೆ ಹಾಗೂ ಮದುವೆಗಳು ಮತ್ತು ಅಂತ್ಯಸಂಸ್ಕಾರಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಹೇರಲಾಗಿದೆ. ಆನ್‌ಲೈನ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News