ಜರ್ಮನಿಯಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆ
Update: 2020-01-28 21:25 IST
ಬರ್ಲಿನ್ (ಜರ್ಮನಿ), ಜ. 28: ಜರ್ಮನಿಯಲ್ಲಿ ಮೊದಲ ಕೊರೋನವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಆ ದೇಶದ ಬವೇರಿಯನ್ ವಲಯದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
‘‘ಸ್ಟಾರ್ನ್‌ಬರ್ಗ್ ವಲಯದ ಪುರುಷನೊಬ್ಬ ಕೊರೋನವೈರಸ್ ಸೋಂಕಿಗೆ ಗುರಿಯಾಗಿರುವುದು ಪತ್ತೆಯಾಗಿದೆ’’ ಎಂದು ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ರೋಗಿಗೆ ಹೇಗೆ ಸೋಂಕು ತಗುಲಿತು ಎನ್ನುವ ವಿವರಗಳನ್ನು ಅಧಿಕಾರಿಗಳು ನೀಡಿಲ್ಲ. ಆದರೆ, ರೋಗಿಯ ಸ್ಥಿತಿ ಉತ್ತಮವಾಗಿದೆ ಎಂದಷ್ಟೇ ಅವರು ಹೇಳಿದರು.