ಚೀನಾದಿಂದ ಹೊರಬಿದ್ದ ವೈರಸ್ ರೂಪಾಂತರಗೊಂಡಿಲ್ಲ: ಅಮೆರಿಕ
Update: 2020-01-28 21:28 IST
ವಾಶಿಂಗ್ಟನ್, ಜ. 28: ಅಮೆರಿಕದಲ್ಲಿ ಪತ್ತೆಯಾಗಿರುವ ಎರಡು ಕೊರೋನವೈರಸ್ ಸೋಂಕು ಪ್ರಕರಣಗಳ ಜಿನೋಮ್ (ಸಂಪೂರ್ಣ ವಂಶವಾಹಿ) ವಿಶ್ಲೇಷಣೆಯಲ್ಲಿ, ಚೀನಾದಿಂದ ಹೊರಹೋದ ಬಳಿಕ ವೈರಸ್‌ಗಳು ರೂಪಾಂತರ (ಮ್ಯುಟೇಟ್)ಗೊಂಡಿಲ್ಲ ಎನ್ನುವುದು ಕಂಡುಬಂದಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಈ ಮಾರಕ ವೈರಸ್‌ನ ನಿಯಂತ್ರಣ ಮತ್ತು ಪತ್ತೆಯ ವಿಧಾನಗಳಲ್ಲಿ ತುರ್ತು ಬದಲಾವಣೆ ತರಲು ತಾನು ಉದ್ದೇಶಿಸಿದ್ದೇನೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದಲ್ಲಿ ಉಸಿರಾಟದ ಕಾಯಿಲೆಗಳ ವಿಭಾಗದ ಮುಖ್ಯಸ್ಥೆ ನ್ಯಾನ್ಸಿ ಮೆಸನೀರ್ ತಿಳಿಸಿದರು.
‘‘ಸದ್ಯಕ್ಕೆ, ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಕೇಂದ್ರ ನಡೆಸಿರುವ ವಿಶ್ಲೇಷಣೆಯಲ್ಲಿ, ವೈರಸ್ ರೂಪಾಂತರಗೊಂಡಂತೆ ಕಾಣುವುದಿಲ್ಲ’’ ಎಂದು ಅವರು ನುಡಿದರು.