‘ಗೋಲಿ ಮಾರೊ’ ಘೋಷಣೆ: ಕೇಂದ್ರ ಸಚಿವ ಅನುರಾಗ್ ಠಾಕೂರ್‌ಗೆ ಚುನಾವಣಾ ಆಯೋಗ ನೋಟಿಸ್

Update: 2020-01-28 16:07 GMT

ಹೊಸದಿಲ್ಲಿ, ಜ. 28: ರಿಥಾಲಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ‘ಗೋಲಿ ಮಾರೋ’ ಘೋಷಣೆ ಕೂಗಿದ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರಿಗೆ ಚುನಾವಣಾ ಆಯೋಗ ಮಂಗಳವಾರ ನೋಟಿಸು ಜಾರಿ ಮಾಡಿದೆ.

ಅನುರಾಗ್ ಠಾಕೂರ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬುದನ್ನು ಚುನಾವಣಾ ಆಯೋಗ ಗುರುತಿಸಿದೆ. ಠಾಕೂರ್ ಅವರಿಗೆ ಪ್ರತಿಕ್ರಿಯೆ ನೀಡಲು ಜನವರಿ 30 ಮಧ್ಯಾಹ್ನ 12 ಗಂಟೆ ವರೆಗೆ ಕಾಲಾವಕಾಶವನ್ನು ಚುನಾವಣಾ ಆಯೋಗ ನೀಡಿದೆ. ಈ ಪ್ರದೇಶದ ಪ್ರತಿಭಟನೆಕಾರರನ್ನು ತೆರವುಗೊಳಿಸಲು ಬಿಜೆಪಿಗೆ ಕೇವಲ ಒಂದು ಗಂಟೆ ಸಾಕು ಎಂದು ಹೇಳುವ ಮೂಲಕ ಶಾಹೀನ್‌ ಬಾಗ್ ಪ್ರತಿಭಟನಕಾರರಿಗೆ ಬೆದರಿಕೆ ಒಡ್ಡಿದ ದಿನದ ಬಳಿಕ ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ಚುನಾವಣಾ ಆಯೋಗ ನೋಟಿಸು ಜಾರಿ ಮಾಡಿದೆ.

ದಿಲ್ಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಸಂದರ್ಭ ಠಾಕೂರ್ ಹಾಗೂ ವರ್ಮಾ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವುದಾಗಿ ದಿಲ್ಲಿ ಚುನಾವಣಾ ಆಯೋಗದ ಕಚೇರಿ ವರದಿ ಸಲ್ಲಿಸಿದ ಬಳಿಕ ಚುನಾವಣಾ ಆಯೋಗ ಈ ನೋಟಿಸುಗಳನ್ನು ಜಾರಿ ಮಾಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News