ಅಫ್ಘಾನ್: ಪತನಗೊಂಡಿದ್ದು ಅಮೆರಿಕ ವಿಮಾನ; ಒಪ್ಪಿಕೊಂಡ ರಕ್ಷಣಾ ಇಲಾಖೆ

Update: 2020-01-28 16:08 GMT

ವಾಶಿಂಗ್ಟನ್, ಜ. 28: ಅಮೆರಿಕದ ಸೇನಾ ವಿಮಾನವೊಂದು ಪೂರ್ವ ಅಫ್ಘಾನಿಸ್ತಾನದ ಗುಡ್ಡಗಾಡುವ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಸೋಮವಾರ ಹೇಳಿದೆ.

ವಿಮಾನ ಪತನಗೊಂಡ ಸ್ಥಳದಲ್ಲಿ ಭಾರೀ ತಾಲಿಬಾನ್ ಉಪಸ್ಥಿತಿ ಇದೆ ಎಂದು ಪೆಂಟಗನ್ ಹೇಳಿದೆಯಾದರೂ, ವಿಮಾನವನ್ನು ತಾಲಿಬಾನ್ ಉಗ್ರರು ಹೊಡೆದುರುಳಿಸಿದ್ದಾರೆ ಎಂಬುದನ್ನು ತಿರಸ್ಕರಿಸಿದೆ.

ಪತನಗೊಂಡ ವಿಮಾನವು ಯುಎಸ್ ಬೊಂಬಾರ್ಡಿಯರ್ ಇ-11ಎ ಎಂಬುದಾಗಿ ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಪಡೆಗಳ ವಕ್ತಾರ ಕರ್ನಲ್ ಸಾನಿ ಲೆಗೆಟ್ ಖಚಿತಪಡಿಸಿದರು. ಈ ವಿಮಾನವನ್ನು ಈ ವಲಯದಲ್ಲಿ ಸೇನಾ ವಾಯು ಸಂಪರ್ಕ ಕೇಂದ್ರವಾಗಿ ಬಳಸಲಾಗುತ್ತಿತ್ತು.

‘‘ಪತನದ ಕಾರಣವನ್ನು ತನಿಖೆ ಮಾಡಲಾಗುತ್ತಿದ್ದು, ಪತನವು ಶತ್ರುವಿನ ದಾಳಿಯಿಂದಾಗಿ ಸಂಭವಿಸಿತು ಎನ್ನುವುದನ್ನು ಸೂಚಿಸುವ ಯಾವುದೇ ಪುರಾವೆಯಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News