ಬರ್ಲಿನ್ ಸೈಕ್ಲಿಂಗ್ ಟೂರ್ನಮೆಂಟ್ : ಅಲ್ಬೆನ್ ಗೆ ಚಿನ್ನ
Update: 2020-01-28 23:10 IST
ಬರ್ಲಿನ್, ಜ.28: ಆರು ದಿನಗಳ ಬರ್ಲಿನ್ ಟೂರ್ನಮೆಂಟ್‌ನಲ್ಲಿ ಭಾರತದ ಸೈಕಲಿಸ್ಟ್ ಎಸೌ ಅಲ್ಬೆನ್ ಪುರುಷರ ಕೆರಿನ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡರು. ಸೋಮವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 20 ಕ್ಲಾಸಿಫಿಕೇಶನ್ ಪಾಯಿಂಟ್ಸ್ ಪಡೆದ ಅಲ್ಬೆನ್ ಮೊದಲ ಸ್ಥಾನ ಪಡೆದರು. 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಝೆಕ್ ಗಣರಾಜ್ಯದ ಥಾಮಸ್ ಬಾಬೆಕ್ ಎರಡನೇ ಸ್ಥಾನ ಪಡೆದಿದ್ದಾರೆ. ಜರ್ಮನಿಯ ಮ್ಯಾಕ್ಸಿಮಿಲನ್ ಲೇವ್ ಕಂಚಿನ ಪದಕ ಮನೆಗೊಯ್ದರು.