ದೋಹಾ: ದ.ಕ.ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

Update: 2020-01-28 18:37 GMT

ದೋಹಾ: ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ (SKMWA ) ದೋಹಾ- ಕತರ್ ಇದರ ಕಾರ್ಯಕಾರಿ ನಿರ್ವಹಣಾ ಸಮಿತಿಯ 27ನೇ ವಾರ್ಷಿಕ ಮಹಾಸಭೆಯು ದೋಹಾದಲ್ಲಿರುವ ಮಾಝ ಹೋಟೆಲ್ ನಲ್ಲಿ ನಡೆಯಿತು. 

ಅಬ್ದುಲ್ ಮಜೀದ್ ಮೂಡುಬಿದಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೂಡುಬಿದಿರೆ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಕಾಸಿಮ್ ಉಡುಪಿ, ರಝಾಕ್ ಪುತ್ತೂರು, ಇಸ್ಮಾಯಿಲ್ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರ್ ಮೋಂಟೆಪದವು, ಕಾರ್ಯದರ್ಶಿಗಳಾಗಿ ಅಫ್ಝಲ್ ಜಮೀಲ್ ಮತ್ತು ಕಾದರ್ ಸಾಗರ್,  ಖಜಾಂಚಿಗಳಾಗಿ ಅಬ್ದುಲ್ ನಾಸಿರ್ ಉಳ್ಳಾಲ, ಸಿಎ ಮುಹಮ್ಮದ್ ಕೊಂಡನ, ಸಲಹೆಗಾರರಾಗಿ ಮುಹಮ್ಮದ್ ಶಮೀಮ್, ಫೈರೋಝ್ ಕುಂದಾಪುರ, ಇಬ್ರಾಹೀಂ ಬ್ಯಾರಿ, ಅಬ್ದುಲ್ ಮಜೀದ್ ಹಳೆಯಂಗಡಿ, ಅಬ್ದುಲ್ಲಾ ಮೋನು, ಸುಹೈಬ್, ಅರಬಿ ಕುಂಞಿ, ಇಫ್ತಿಕಾರ್, ಇಮ್ತಿಯಾಝ್ ಅಮೀರ್ ಹಂಝ ಹಾಗು ಸದಸ್ಯರುಗಳಾಗಿ ಅಬ್ಬು ಜೋಕಟ್ಟೆ, ಇಸ್ಮಾಯಿಲ್ ಎಂಎನ್ ಜೋಕಟ್ಟೆ, ಅಬ್ದುಲ್ ಖಾದರ್ ಜೀಲಾನಿ, ಅಬ್ದುಲ್ ರಶೀದ್, ಇಲ್ಯಾಸ್ ಬ್ಯಾರಿ, ಮುಹಮ್ಮದ್ ಇನಾಯತ್, ರಿಯಾಝ್ ಉಮರ್, ಸಫ್ವಾನ್ ಸಂತೋಷ್ ನಗರ, ಮುಶೀರ್ ನವಾಝ್, ಅಬ್ದುಲ್ ಹಮೀದ್ ಕತರ್ ಅವರನ್ನು ಆಯ್ಕೆ ಮಾಡಲಾಯಿತು.

ಅದ್ನಾನ್ ಅಮೀರ್ ಹಂಝ ಕಿರಾಅತ್ ಪಠಿಸಿದರು. ಕಾಸಿಮ್ ಉಡುಪಿ ಸ್ವಾಗತಿಸಿದರು, ನಾಸಿರ್ ಉಳ್ಳಾಲ ಮತ್ತು ಸತ್ತಾರ್ ಮೋಂಟೆಪದವು ವಾರ್ಷಿಕ ವರದಿ ವಾಚಿಸಿದರು. ರಝಾಕ್ ಪುತ್ತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News