ಮದರಂಗಿ ಪತ್ರಿಕೆ: ರಾಜ್ಯ ಮಟ್ಟದ ಪ್ರಬಂಧ, ಕವನ ಸ್ಪರ್ಧೆ ಫಲಿತಾಂಶ ಪ್ರಕಟ

Update: 2020-01-29 04:42 GMT

ಮಂಗಳೂರು, ಜ.29: ಮದರಂಗಿ ಪತ್ರಿಕೆ  ಮೀಲಾದುನ್ನಬಿ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಕಟಗೊಂಡಿದ್ದು, ಮುನೀರಾ ತೊಕ್ಕೊಟು ಪ್ರಥಮ, ಸಹನಾ ಕಾಂತಬೈಲು ಮಡಿಕೇರಿ ದ್ವಿತೀಯ ಹಾಗೂ ನಿಝಾಂ ಪದ್ಮುಂಜ ತೃತೀಯ ಬಹುಮಾನಕ್ಕೆ  ಆಯ್ಕೆಯಾಗಿದ್ದಾರೆ.

ಹಿದಾಯತ್  ಕಂಡ್ಲೂರಿ ಕುಂದಾಪುರ, ಝು.ಮುಮ್ತಾಝ್, ಅತಾವುಲ್ಲಾ ಇಬ್ರಾಹೀಂ ಉದಯವಾಣಿ ಮೈಸೂರು, ರುಕ್ಸಾನಾ ಫಾತಿಮಾ ಉಪ್ಪಿನಂಗಡಿ, ಮುಹಮ್ಮದ್ ಕಬೀರ್ ಬಕ್ರವಳ್ಳಿ, ಅಮ್ರೀನ ಕ್ಯೂಟಿಎಫ್ ಉಜಿರೆ, ಅಬೂ ಶಹೀರ್ ಅಬ್ದುರ್ರಝಾಕ್ ಮದನಿ ಕಬಕ, ಎನ್.ಎಸ್.ಶರೀಫ್ ಕೈರಂಗಳ ಅವರ ಪ್ರಬಂಧ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ಕವನ ಸ್ಪರ್ಧೆಯಲ್ಲಿ ಮಿಸ್ರಿಯಾ ಇಸ್ಮತ್ ಫಜೀರ್ ಪ್ರಥಮ, ಎನ್.ವಿಶ್ವನಾಥ್ ನೇರಳಕಟ್ಟೆ ದ್ವಿತೀಯ, ರಮ್ಲತ್ ನಂದರಬೆಟ್ಟು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

 ಶಾಕಿರ ಉಪ್ಪಿನಂಗಡಿ, ಸಫಾ  ಕಾರ್ಕಳ, ಎನ್.ಕೆ.ಮುಹಮ್ಮದ್ ಹನೀಫ್ ನಂದರಬೆಟ್ಟು, ಮೊಗೇರಿ ಶೇಖರ ದೇವಾಡಿಗ ಭಟ್ರಮನೆ ಬ್ರಹ್ಮಾವರ, ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು, ರುಕ್ಸಾನಾ ಫಾತಿಮ ಉಪ್ಪಿನಂಗಡಿ, ಜಯಶ್ರೀ ಬೈಲುಪದವು ಪುಣಚ, ರಹ್ಮತ್ ಪುತ್ತೂರು ಯಶ್ವಿತ್, ಅಶೀರುದ್ದೀನ್ ಮಂಜನಾಡಿ, ರಫೀಕ್ ಕಲ್ಕಟ್ಟ, ಗ್ರೀಶ್ಮಾ ಕೆ.ಎಚ್.ಕೊಡಿಪ್ಪಾಡಿ ಪುತ್ತೂರು ಅವರ ಕವನ ತೀರ್ಪುಗಾರರ  ಮೆಚ್ಚುಗೆಗೆ ಪಾತ್ರವಾಗಿವೆ.

 ಫೆ.2ರಂದು ಅಪರಾಹ್ನ 2 ಗಂಟೆಗೆ ನಡೆಯುವ ಮದರಂಗಿ ಪತ್ರಿಕೆ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಪ್ರಬಂಧ, ಕವನಗಳಿಗೆ ಪ್ರಮಾಣ ಪತ್ರ ಮತ್ತು ಕಿರು ಕಾಣಿಕೆ ನೀಡಿ ಗೌರವಿಸಲಾಗುವುದೆಂದು  ಮದರಂಗಿ ಪತ್ರಿಕೆ ಸಂಪಾದಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News