ವಿ.ಕೆ. ಫರ್ನಿಚರ್, ಇಲೆಕ್ಟ್ರಾನಿಕ್ಸ್‌ನ ನೂತನ ತೊಕ್ಕೊಟ್ಟು ಶೋರೂಂ ಶುಭಾರಂಭ

Update: 2020-01-29 05:12 GMT

ಮಂಗಳೂರು, ಜ.29: ಅತ್ಯಾಧುನಿಕ ಪೀಠೋಪಕರಣ ಹಾಗೂ ಗೃಹೋಪಯೋಗಿ ಸಾಮಗ್ರಿಗಳ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನ ನೂತನ ಹವಾನಿಯಂತ್ರಿತ ಶೋರೂಂ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ಯೂನಿಕ್ ಮಾಲ್‌ನಲ್ಲಿ ಬುಧವಾರ ಬೆಳಗ್ಗೆ ಶುಭಾರಂಭಗೊಂಡಿತು.

ನೂತನ ಶೋರೂಂನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು  ಉದ್ಘಾಟಿಸಿ ಮಾತನಾಡಿ, ವಿ.ಕೆ. ಫರ್ನಿಚರ್ ಶೋರೂಂ
ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತದೆ. ಸಾಧನೆ ಮಾಡುವ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ. ಸಂಸ್ಥೆ ಇನ್ನಷ್ಟು ಉನ್ನತ ಸ್ಥಾನ ಪಡೆಯಲಿ ಎಂದು ಶುಭ ಹಾರೈಸಿದರು.

ಶಾಸಕ ಯು.ಟಿ. ಖಾದರ್ ಮಾತನಾಡಿ, ವಿ‌.ಕೆ.ಫರ್ನಿಚರ್‌ನ ಮೂರನೇ ಶೋರೂಂ ಲೋಕಾರ್ಪಣೆಗೊಂಡಿದೆ. ವ್ಯಾಪಾರದಲ್ಲಿ ವಿಠ್ಠಲ್ ಕುಲಾಲ್  ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಹಂತ ಹಂತವಾಗಿ ಸಂಸ್ಥೆಯು ಸಾಧನೆಗಳನ್ನು ದಾಖಲಿಸುತ್ತಿದೆ. ಮುಂದಿನ ವರ್ಷ ಇನ್ನೊಂದು ಶೋರೂಂ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಉಳ್ಳಾಲ ಜುಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸೋಮೇಶ್ವರ ಸೋಮನಾಥ ದೇವಸ್ಥಾನ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಯಾಜಕ ರೆ.ಡಾ.ಜಾನ್ ಬಾಪ್ಟಿಸ್ಟ್ ಸಲ್ದಾನ, ರಘುರಾಮ ರೈ ಮುಂಬೈ ಉಳ್ಳಾಲಗುತ್ತು, ಉದ್ಯಮಿಗಳಾದ ಯು.ಕೆ. ಯೂಸುಫ್, ಅಬ್ದುಲ್ ಖಾದರ್, ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಶೋರೂಂ ಮಾಲಕರಾದ ವಿಠ್ಠಲ್ ಕುಲಾಲ್ ಹಾಗೂ ವಿನುತಾ ವಿಟ್ಟಲ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಚೇತನ್ ಶೆಟ್ಟಿ, ಸೌಜನ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಲ್ಲಾಪುವಿನ ನೂತನ ಶೋರೂಂ ಮೂರು ಮಹಡಿಗಳನ್ನು ಹೊಂದಿದ್ದು, ಕೆಳ ಅಂತಸ್ತಿನಲ್ಲಿ ಡೈನಿಂಗ್ ಟೇಬಲ್ಸ್, ಎಲ್ಲ ಮಾದರಿಯ ಸೋಫಾ ಸೆಟ್ಸ್, ಆಧುನಿಕ ವಿನ್ಯಾಸದ ಬೆಡ್‌ರೂಂ ಸೆಟ್ ವಿದ್ ಮ್ಯಾಟ್ರೆಸ್, ಕಾಟ್ಸ್, ಎಲ್ಲ ಮಾದರಿಯ ಗೃಹ ಆಲಂಕಾರಿಕ ವಸ್ತುಗಳು, ಡ್ರೆಸ್ಸಿಂಗ್ ಟೇಬಲ್‌ಗಳು ಮತ್ತು ಮಿರರ್ಸ್, ವಿವಿಧ ರೀತಿಯ ಗಡಿಯಾರ ಮತ್ತು ಫೋಟೊ ಫ್ರೇಮ್ಸ್, ವಾಲ್ ಡೆಕೋರೇಟಿವ್ಸ್, ಎಲ್ಲ ಮಾದರಿಯ ಔಟ್‌ಡೋರ್ ಫರ್ನಿಚರ್ಸ್‌ಗಳನ್ನು ಒಳಗೊಂಡಿದೆ.

ಮೊದಲ ಅಂತಸ್ತಿನಲ್ಲಿ ಆ್ಯಂಡ್ರಾಯ್ಡ್ ಎಲ್ಇಡಿ, ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ವಾಶಿಂಗ್ ಮೆಶಿನ್, ರೆಫ್ರಿಜರೇಟರ್, ಮೊಬೈಲ್, ಲ್ಯಾಪ್‌ಟಾಪ್‌ಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಡೋರ್ ಮ್ಯಾಟ್ಸ್, ಬೆಡ್‌ಶೀಟ್ಸ್, ಕರ್ಟನ್ಸ್, ಬ್ಲೈಂಡ್ಸ್, ಹೋಮ್ ಇಂಟಿಯರ್ ಸೆಕ್ಷನ್, ಹೋಮ್ ಅಪ್ಲಾಯನ್ಸೆಸ್, ಕಿಚನ್ವೇರ್‌ಗಳ ಅಪಾರ ಸಂಗ್ರಹವಿದೆ.

ಎಲ್ಲ ಮಾದರಿಯ ಕಚೇರಿ ಪೀಠೋಪಕರಣಗಳು, ಕುರ್ಚಿಗಳು, ಬೆಡ್ರೂಂ ಸೆಟ್‌ಗಳು, ವಾಡ್ರೋಬ್ಸ್, ದೇವರ ಮಂಟಪಗಳು ಹಾಗೂ ಮ್ಯಾಟ್ರೆಸಸ್‌ಗಳ ಸಂಗ್ರಹವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News