ಉಪ್ಪಿನಂಗಡಿ: ಗ್ಯಾಸ್ ವಿತರಣಾ ಕಚೇರಿಯಲ್ಲಿ ಬೆಂಕಿ; ಅಪಾರ ಹಾನಿ

Update: 2020-01-29 14:04 GMT

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗ್ಯಾಸ್ ವಿತರಣಾ ಸಂಸ್ಥೆಯ ಕಚೇರಿಯಲ್ಲಿ ತಡ ರಾತ್ರಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದ್ದು, ಕಚೇರಿ ಒಳಗಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ.

ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಬಳಿ ಇರುವ ಅಮೂಲ್ಯ ಗ್ಯಾಸ್ ಏಜೆನ್ಸಿ ಸಂಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 20 ಸ್ಟೌವ್, 200 ಲೈಟರ್, ಉಪಕರಣಗಳ ಡಿಸ್‍ಪ್ಲೆ ಶೋರೂಂ ಕರಟಿ ಹೋಗಿದೆ. ಕಚೇರಿಯೊಳಗಿನ ಫ್ಯಾನ್ ಇತರೇ ಸೊತ್ತುಗಳು, ವಿದ್ಯುತ್ ಸಂಪರ್ಕದ ವೈರ್‍ಗಳೂ ಸುಟ್ಟು ಹೋಗಿದ್ದು, ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಠ ಉಂಟಾಗಿರುವುದಾಗಿ ವಿತರಣಾ ಸಂಸ್ಥೆಯ ಮಾಲಕ ಚಂದಪ್ಪ ಮೂಲ್ಯ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಗ್ಯಾಸ್ ಸ್ಪೋಟದ ಚರ್ಚೆ:  ರಾತ್ರಿ ಗ್ಯಾಸ್ ವಿತರಣಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ ಆಗಿದೆ ಎಂದು ಸುದ್ದಿಯಾಯಿತು. ಬಳಿಕ ಅಟೋ ರಿಕ್ಷಾಗಳಿಗೆ ಇಡುವ ಚಿಕ್ಕ ಗ್ಯಾಸ್ ಸಿಲಿಂಡರ್ ಎಂದು ಪ್ರಚಾರ ಪಡೆಯಿತು. ಆದರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸಂಸ್ಥೆಯ ಮಾಲಕರು ಈ ಬಗ್ಗೆ ಪ್ರತಿಕ್ರಿಯಿಸಿ "ಇದು ಕಚೇರಿ ಆಗಿದ್ದು, ಇಲ್ಲಿ ಗ್ಯಾಸ್ ಜಾಡಿಗಳನ್ನು ಇಡುವುದಿಲ್ಲ. ಇದು ಗ್ಯಾಸ್ ಸ್ಪೋಟ ಅಲ್ಲ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News