ಉಪ್ಪಿನಂಗಡಿ: ವಾಹನ ಸವಾರರಿಗೆ ಹಲ್ಲೆ ಪ್ರಕರಣ; ಇಬ್ಬರ ಬಂಧನ

Update: 2020-01-29 16:22 GMT

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮದ ಕೋಲ್ಪೆ ಎಂಬಲ್ಲಿ ಜ. 26ರಂದು ರಾತ್ರಿ ಪಿಕ್‍ಅಪ್ ವಾಹನವನ್ನು ಅಡ್ಡಗಟ್ಟಿದ ತಂಡವೊಂದು ಪಿಕ್‍ಅಪ್ ವಾಹನದಲಿದ್ದ ಇಬ್ಬರಿಗೆ ಹಲ್ಲೆ ನಡೆಸಿ, ಪಿಕ್‍ಅಪ್ ವಾಹನವನ್ನು ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕೋಲ್ಪೆ ನಿವಾಸಿಗಳಾದ ಅಶ್ರಫ್ ಮತ್ತು ನವಾಝ್ ಬಂಧಿತ ಆರೋಪಿಗಳು. ಕೋಲ್ಪೆ ಬಸ್ ನಿಲ್ದಾಣದ ಬಳಿ ಇದ್ದ ಇವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೊಕ್ಕಡ ನಿವಾಸಿಗಳಾದ ರೂಪೇಶ್ ಹಾಗೂ ನಾಣ್ಯಪ್ಪ ಎಂಬವರು ಗೇರುಕಟ್ಟೆಯಿಂದ ನೆಲ್ಯಾಡಿ ಕಡೆ ಹೋಗುತ್ತಿದ್ದಾಗ ಎದುರಿನಿಂದ ಸಾಗುತ್ತಿದ್ದ ಇನ್ನೊಂದು ಪಿಕ್‍ಅಪ್ ವಾಹನದಲ್ಲಿ ದನ ಸಾಗಿಸುತ್ತಿದ್ದ ಕೃತ್ಯ ಕಂಡು ಅದನ್ನು ಹಿಂಬಾಲಿಸಿ ಹೋಗಿದ್ದರು. ಕೋಲ್ಪೆ ಬಳಿ ದನ ಸಾಗಿಸುತ್ತಿದ್ದ ಪಿಕ್‍ಅಪ್ನಲ್ಲಿದ್ದವರು ಸೇರಿದಂತೆ ಸುಮಾರು ಏಳರಿಂದ ಎಂಟು ಮಂದಿಯ ತಂಡವೊಂದು ಇವರ ಪಿಕ್‍ಅಪ್ ವಾಹನವನ್ನು ಅಡ್ಡಗಟ್ಟಿ ಇವರಿಗೆ ಅವಾಚ್ಯವಾಗಿ ನಿಂದಿಸಿ, ಕೈ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಲ್ಲದೆ, ಇವರ ಪಿಕ್‍ಅಪ್ ವಾಹನವನ್ನು ಜಖಂಗೊಳಿಸಿ, ಇವರಿಗೆ ಕೊಲೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News