ಕ್ರೆಡಿಟ್ ಕಾರ್ಡ್ ನಂಬರ್ ಬಳಸಿ ಹಣ ವಂಚನೆ: ದೂರು

Update: 2020-01-29 16:36 GMT

ಉಡುಪಿ, ಜ.29: ಕ್ರೆಡಿಟ್ ಕಾರ್ಡ್ ನಂಬರನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿ, ಸಾವಿರಾರು ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಕುಂಭಾಶಿ ಕೊರವಡಿ ಕ್ರಾಸ್ ನಿವಾಸಿ ರಾಜೇಶ್ ಬಂಗೇರ ಎಂಬವರ ಪತ್ನಿ ಜೆನ್ನಿಫರ್ ಬಂಗೇರ(48) ಎಂಬವರು ಡಿ.6ರಂದು ಆನ್‌ಲೈನ್ ನಲ್ಲಿ ಡ್ರೆಸ್ ಖರೀದಿಸಿದ ಬಗ್ಗೆ ತನ್ನ ಮಿಂತ್ರ ಆ್ಯಪ್‌ಗೆ ಕ್ರೆಡಿಟ್ ಕಾರ್ಡನ್ನು ಸ್ವೈಪ್ ಮಾಡಿ ಹಣವನ್ನು ಪಾವತಿಸಿದ್ದರು.

ಇವರ ಕಾರ್ಡ್ ನಂಬರ್‌ನ್ನು ಬಳಸಿ, ದುಷ್ಕರ್ಮಿಗಳು ಮಿಂತ್ರ ಆಪ್ ಮೂಲಕ ಆನ್‌ಲೈನ್‌ನಿಂದ ಹಣ ವರ್ಗಾವಣೆ ಮಾಡುತ್ತಿರುವುದನ್ನು ಗಮನಿಸಿದ, ಜೆನ್ನಿಫರ್ ಬಂಗೇರ ಅದೇ ದಿನ ತಮ್ಮ ಕಾರ್ಡ್‌ನ್ನು ಬ್ಲಾಕ್ ಮಾಡಿದರು. ಆದರೂ ಕೂಡ ಡಿ.6ರಿಂದ ಡಿ.9ರವರೆಗೆ ದುಷ್ಕರ್ಮಿಗಳು ಜೆನ್ನಿಫರ್ ಬಂಗೇರರ ಕ್ರೆಡಿಟ್ ಕಾರ್ಡ್ ನಂಬರನ್ನು ಮೋಸದಿಂದ ದುರ್ಬಳಕೆ ಮಾಡಿ, ಒಟ್ಟು 58,498ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News