ನಿತಿನ್ ಉಪಾಧ್ಯ ಭರ್ಜರಿ 182 ನೇತಾಜಿ ಕ್ಲಬ್ 111 ರನ್ ಜಯ

Update: 2020-01-29 17:14 GMT

ಮಣಿಪಾಲ, ಜ.29: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದಿರುವ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್, ಅಮರ್‌ದೀಪ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 111 ರನ್‌ಗಳ ಅಂತರದ ಭರ್ಜರಿ ಜಯವನ್ನು ದಾಖಲಿಸಿತು.

ನೇತಾಜಿ ಕ್ಲಬ್ಬಿನ ನಿತಿನ್ ಉಪಾಧ್ಯ ಪರ್ಕಳ ಇವರು 18 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನೊಳಗೊಂಡ ಭರ್ಜರಿ 182 ರನ್‌ಗಳನ್ನು ತಂಡಕ್ಕೆ ಕೊಡುಗೆ ನೀಡಿ ವಿಜಯದ ಪ್ರಮುಖ ರೂವಾರಿಯಾದರು.

ಮೊದಲು ಬ್ಯಾಟಿಂಗ್ ನಡೆಸಿದ ನೇತಾಜಿ ಕ್ಲಬ್ ನಿಗದಿತ 50 ಓವರುಗಳಲ್ಲಿ 9 ವಿಕೆಟ್‌ಗೆ 346 ರನ್‌ಗಳ ಬೃಹತ್ ಮೊತ್ತ ಗಳಿಸಿತು. ನಾಯಕ ಮೆಹಬೂಬ್ (62), ಅಬುಝಾರ್ (43) ರನ್ ಗಳಿಸಿದರು. ಉತ್ತರವಾಗಿ ಅಮರ್‌ದೀಪ್ ತಂಡ ಸಂದೀಪ್ ಭಂಡಾರಿ (47), ದರ್ಶನ್ ದೇವಯ್ಯ (35) ಇವರ ಬ್ಯಾಟಿಂಗ್ ನೆರವಿನಿಂದ 235 ರನ್ ಗಳಿಸಿ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News