ಟೋಕಿಯೊ ಒಲಿಂಪಿಕ್ಸ್‌ಗೆ ನೀರಜ್ ಚೋಪ್ರಾ ತೇರ್ಗಡೆ

Update: 2020-01-29 17:53 GMT

ಹೊಸದಿಲ್ಲಿ, ಜ.29: ಭಾರತದ ಅಗ್ರಮಾನ್ಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೊಣಕೈ ಗಾಯದಿಂದ ಚೇತರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ಬುಧವಾರ ನಡೆದ ಜಾವೆಲಿನ್ ಕೂಟದಲ್ಲಿ ತನ್ನ ನಾಲ್ಕನೇ ಪ್ರಯತ್ನದಲ್ಲಿ 87.86 ಮೀ.ದೂರಕ್ಕೆ ಜಾವೆಲಿನ್ ಎಸೆದು ಒಲಿಂಪಿಕ್ಸ್ ಅರ್ಹತಾ ಗುರುತನ್ನು (85 ಮೀ.)ದಾಟಿ ನಿಂತರು.ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ರೋಹಿತ್ ಯಾದವ್ ಸಹಿತ ಐವರು ಭಾಗವಹಿಸಿದ್ದರು. 77.16 ಮೀ.ದೂರಕ್ಕೆ ಜಿಗಿದ ರೋಹಿತ್ ಎರಡನೇ ಸ್ಥಾನ ಪಡೆದರು. ಫ್ರಾನ್ಸ್‌ನ ಇತರ ಮೂವರು ಜಾವೆಲಿನ್ ಎಸೆತಗಾರರು 70 ಮೀ.ಮಾರ್ಕ್ ಕ್ರಮಿಸಲು ವಿಫಲರಾದರು.

‘‘ನಾವು ದಕ್ಷಿಣ ಆಫ್ರಿಕಾ ಅಥ್ಲೆಟಿಕ್ಸ್ ಸಂಸ್ಥೆಯೊಂದಿಗೆ ಚರ್ಚಿಸಿದ್ದು, ಜಾವೆಲಿನ್ ಕೂಟ ಅಂತರ್‌ರಾಷ್ಟ್ರೀಯ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿದೆ ಎಂದು ದೃಢಪಡಿಸಿದೆ. ನೀರಜ್ 2020ರ ಒಲಿಂಪಿಕ್ಸ್ ಗೆ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ’’ ಎಂದು ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ನಿರ್ವಹಣಾಧಿಕಾರಿ ದೇವೇಶ್ ಭಾಲ್ ತಿಳಿಸಿದ್ದಾರೆ.

ಚೋಪ್ರಾ ಕಳೆದ ವರ್ಷದ ಎಪ್ರಿಲ್‌ನಲ್ಲಿ ಭಾರತ ತಂಡಕ್ಕೆ ವಾಪಸಾಗಲು ಚಿಂತನೆ ನಡೆಸಿದ್ದರು. ಆದರೆ, ಸ್ಟಾರ್ ಜಾವೆಲಿನ್ ಎಸೆತಗಾರನಿಗೆ 2018ರ ನವೆಂಬರ್‌ನಿಂದ ಬಲ ಮೊಣಕೈನಲ್ಲಿ ನೋವು ಬಾಧಿಸುತ್ತಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News