ಯುವ ಕೌಶಲ್ಯ ಕರ್ನಾಟಕ ತರಬೇತಿ

Update: 2020-01-30 17:50 GMT

ಉಡುಪಿ, ಜ.30: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವ ಕೌಶಲ್ಯ ಎಂಬ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮ, ಪದವೀಧರರಿಗೆ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಮಾರ್ಗದರ್ಶನ, ಸಮಾಲೋಚನೆ, ಮೃದು ಕೌಶಲ್ಯ ತರಬೇತಿ, ವೌಲ್ಯಮಾಪನ, ಉದ್ಯೋಗಾವಕಾಶಗಳ ಬಗ್ಗೆ ತರಬೇತಿ ನೀಡಿ ಉದ್ಯೋಗಾರ್ಹತೆಯ ಮಟ್ಟವನ್ನು ಹೆಚ್ಚಿಸಲಾಗುವುದು.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮ, ಪದವೀರರಿಗೆಹಾಗೂಸ್ನಾತಕೋತ್ತರಪದವೀರರಿಗೆ ಮಾರ್ಗದರ್ಶನ, ಸಮಾಲೋಚನೆ, ಮೃದು ಕೌಶಲ್ಯ ತರಬೇತಿ, ವೌಲ್ಯಮಾಪನ, ಉದ್ಯೋಗಾವಕಾಶಗಳ ಬಗ್ಗೆ ತರಬೇತಿ ನೀಡಿ ಉದ್ಯೋಗಾರ್ಹತೆಯ ಮಟ್ಟವನ್ನು ಹೆಚ್ಚಿಸಲಾಗುವುದು. ಈ ಕಾರ್ಯಕ್ರಮ ಫೆ.4ರಂದು ಮಣಿಪಾಲದ ಪ್ರಗತಿ ನಗರದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ, ಫೆ.7ರಂದು ಕಾರ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಫೆ.10ರಂದು ಕುಂದಾಪುರ ತಾಲೂಕು ಕೋಟೇಶ್ವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 9:30ರಿಂದ ಸಂಜೆ 5:30ರ ವರೆಗೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಕಾಲೇಜು/ಸಂಸ್ಥೆ ಹಾಗೂ ಜಿಲ್ಲೆಯ ಉದ್ಯೋಗಾಕಾಂಕ್ಷಿ 18 ರಿಂದ 35ವರ್ಷ ವಯೋಮಿತಿ ಹೊಂದಿರುವ ಅ್ಯರ್ಥಿಗಳು -www. kaushalkar.com - ವೆಬ್‌ಸೈಟ್‌ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿ, ನೋಂದಣಿ ಸಂಖ್ಯೆಯೊಂದಿಗೆ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574869 ಹಾಗೂ 9480259790 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News