ಆಸ್ಟ್ರೇಲಿಯನ್ ಓಪನ್: ರೋಹನ್ ಬೋಪಣ್ಣಗೆ ಸೋಲು

Update: 2020-01-30 18:23 GMT

ಮೆಲ್ಬೋರ್ನ್, ಜ.30: ರೋಹನ್ ಬೋಪಣ್ಣ ಮತ್ತು ಅವರ ಉಕ್ರೇನಿಯನ್ ಪಾಲುದಾರ ನಾಡಿಯಾ ಕಿಚೆನೋಕ್ ಗುರುವಾರ ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ-ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುವುದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ.

ರೋಹನ್ ಬೋಪಣ್ಣ ಮತ್ತು ನಾಡಿಯಾ ಕಿಚೆನೋಕ್ 0-6, 2-6ರಿಂದ ಸೋತಿದ್ದರಿಂದ, ಈಗ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಸೋಲುವುದರೊಂದಿಗೆ ಭಾರತದ ಎಲ್ಲ ಆಟಗಾರರು ಕಣದಿಂದ ನಿರ್ಗಮಿಸಿದ್ದಾರೆ.

ನಿಕೋಲಾ ಮೆಕ್ಟಿಕ್ ಮತ್ತು ಬಾರ್ಬೊರಾ ಕ್ರೆಜ್ಸಿಕೊವಾ ಅವರು 47 ನಿಮಿಷಗಳಲ್ಲಿ 6-0, 6-2 ಅಂತರದಿಂದ ಬೋಪಣ್ಣ-ನಾಡಿಯಾ ಅವರನ್ನು ಸೋಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News