ನಾಲ್ಕನೇ ಟ್ವೆಂಟಿ-20: ಮನೀಷ್ ಅರ್ಧಶತಕ, ಭಾರತ 165/8

Update: 2020-01-31 09:19 GMT

ವೆಲ್ಲಿಂಗ್ಟನ್, ಜ.31: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅರ್ಧಶತಕದ ಕೊಡುಗೆಯ(ಔಟಾಗದೆ 50)ನೆರವಿನಿಂದ ಭಾರತ ತಂಡ ಶುಕ್ರವಾರ ಇಲ್ಲಿ ನಡೆದ ನಾಲ್ಕನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ಗೆ 166 ರನ್ ಗುರಿ ನೀಡಿದೆ.

ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

ಕೆಎಲ್ ರಾಹುಲ್(39, 26 ಎಸೆತ)ಸಂಜು ಸ್ಯಾಮನ್ಸ್ ಜೊತೆ ಇನಿಂಗ್ಸ್ ಆರಂಭಿಸಿದರು. ಸಂಜು(8) 2ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ(11),ಶ್ರೇಯಸ್ ಅಯ್ಯರ್(1), ರಾಹುಲ್, ಶಿವಂ ದುಬೆ(12) ಹಾಗೂ ವಾಷಿಂಗ್ಟನ್ ಸುಂದರ್(0)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಭಾರತ 88 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 7ನೇ ವಿಕೆಟ್‌ಗೆ 43 ರನ್ ಸೇರಿಸಿದ ಮನೀಷ್ ಪಾಂಡೆ(ಔಟಾಗದೆ 50, 36 ಎಸೆತ, 3 ಬೌಂಡರಿ)ಹಾಗೂ ಶಾರ್ದೂಲ್ ಠಾಕೂರ್(20, 15 ಎಸೆತ, 2 ಬೌಂಡರಿ)ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಕಿವೀಸ್‌ನ ಪರ ಇಶ್ ಸೋಧಿ(3-26) ಹಾಗೂ ಬೆನೆಟ್ಟ್(2-41)ಐದು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News