ನಾಲ್ಕನೇ ಟಿ-20: ಭಾರತಕ್ಕೆ ಮತ್ತೊಂದು ‘ಸೂಪರ್’ ಜಯ

Update: 2020-01-31 13:01 GMT

ವೆಲ್ಲಿಂಗ್ಟನ್, ಜ.31: ನ್ಯೂಝಿಲ್ಯಾಂಡ್ ಮತ್ತು ಭಾರತ ತಂಡಗಳ ನಡುವಿನ ನಾಲ್ಕನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯ  ಇಂದು ಟೈ ಆಗಿದ್ದು, ವಿಜೇತರನ್ನು ನಿರ್ಧರಿಸಲು ಬಳಿಕ ನಡೆದ ಸೂಪರ್ ಓವರ್ ನಲ್ಲಿ  ಭಾರತ  ಜಯ ಗಳಿಸಿದೆ.

ಸೂಪರ್ ಓವರ್ ನಲ್ಲಿ  ಗೆಲುವಿಗೆ 14 ರನ್ ಗಳಿಸಬೇಕಿದ್ದ ಭಾರತ 1 ವಿಕೆಟ್ ನಷ್ಟದಲ್ಲಿ   16 ರನ್ ಗಳಿಸುವ  ಮೂಲಕ  ಗೆಲುವಿನ ನಗೆ ಬೀರಿತು. ನ್ಯೂಝಿಲ್ಯಾಂಡ್ ತಂಡ ಸೂಪರ್ ಓವರ್ ನಲ್ಲಿ 1 ವಿಕೆಟ್ ನಷ್ಟದಲ್ಲಿ 13 ರನ್ ಗಳಿಸಿತ್ತು. ಸೌಥಿ  ಓವರ್ ನಲ್ಲಿ  ಆರಂಭಿಕ ಬ್ಯಾಟ್ಸ್ ಮನ್ ಲೋಕೇಶ್ ರಾಹುಲ್  10 ರನ್ (3ಎ, 1ಸಿ, 1ಬೌ) ,   ನಾಯಕ ವಿರಾಟ್ ಕೊಹ್ಲಿ  6 (2 ಎ 1ಬೌ) ರನ್  ಗಳಿಸಿದರು. 

ಇದರೊಂದಿಗೆ ಭಾರತ ಸೂಪರ್ ಓವರ್ ನಲ್ಲಿ ಎರಡನೇ ಜಯ ಗಳಿಸಿದ್ದು, ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.

ಇದಕ್ಕೂ ಮೊದಲು ಗೆಲುವಿಗೆ 166 ರನ್ ಗಳಿಸಬೇಕಿದ್ದ ನ್ಯೂಝಿಲ್ಯಾಂಡ್ ತಂಡ  ನಿಗದಿತ 20  ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 165 ರನ್  ಗಳಿಸುವ ಮೂಲಕ ಪಂದ್ಯ ಟೈ ಆಗಿ ಕೊನೆಗೊಂಡಿತು.

ಕೊನೆಯ ಓವರ್ ನ ಕೊನೆಯ  ಎಸೆತದಲ್ಲಿ ನ್ಯೂಝಿಲ್ಯಾಂಡ್  ಗೆಲುವಿಗೆ 2 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಮಿಚೆಲ್ ಸ್ಯಾಂಟ್ನೆರ್  ಅವರು ಶಾರ್ದುಲ್ ಠಾಕೂರ್ ಅವರ  ಕೊನೆಯ ಎಸೆತದಲ್ಲಿ 1 ರನ್ ಗಳಿಸಿ ಸ್ಕಾಟ್ ಕುಗ್ಲೆಲೆಜಿನ್  ನೆರವಿನಲ್ಲಿ ಎರಡನೇ ರನ್  ಗಳಿಸುವ ಯತ್ನದಲ್ಲಿದ್ದಾಗ  ಅವರನ್ನು ಸಂಜು ಸ್ಯಾಮ್ಸನ್ ಮತ್ತು ಲೋಕೇಶ್ ರಾಹುಲ್ ಸೇರಿಕೊಂಡು ರನೌಟ್ ಮಾಡಿದರು. ಇದರೊಂದಿಗೆ ಪಂದ್ಯ ಮತ್ತೊಮ್ಮೆ ರೋಚಕ ಟೈ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News