ನಾವು ಮಕ್ಕಳ ಕೈಗೆ ಪೆನ್ ನೀಡಿದರೆ, ಅವರು ಮಕ್ಕಳ ಕೈಗೆ ಗನ್ ನೀಡುತ್ತಾರೆ: ಅರವಿಂದ್ ಕೇಜ್ರಿವಾಲ್

Update: 2020-01-31 20:09 GMT

ಹೊಸದಿಲ್ಲಿ, ಜ.31: ಜಾಮಿಯಾ ವಿವಿ ಬಳಿ ಗುರುವಾರ ನಡೆದ ಗುಂಡಿನ ದಾಳಿ ಪ್ರಕರಣವನ್ನು ಉಲ್ಲೇಖಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ನಮ್ಮ ಪಕ್ಷ ಮಕ್ಕಳಿಗೆ ಪೆನ್ ಕೊಟ್ಟರೆ ಇತರರು ಗನ್ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ದಿಲ್ಲಿ ಸರಕಾರಿ ಶಾಲೆಯ ಮಕ್ಕಳು ಐಟಿ ಟೆಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿರುವ ಕೇಜ್ರಿವಾಲ್, ನಾವು ಮಕ್ಕಳ ಕೈಯಲ್ಲಿ ಪೆನ್ನು ಮತ್ತು ಕಂಪ್ಯೂಟರ್ ನೀಡಿ ಅವರ ಕಣ್ಣುಗಳಲ್ಲಿ ಉದ್ಯಮಶೀಲತೆಯ ಕನಸನ್ನು ಬಿತ್ತುತ್ತೇವೆ. ಆದರೆ ಇತರರು ಮಕ್ಕಳ ಕೈಯಲ್ಲಿ ಗನ್ ನೀಡುತ್ತಿದ್ದಾರೆ. ನಿಮ್ಮ ಮಕ್ಕಳ ಕೈಯಲ್ಲಿ ಪೆನ್ ಇರಬೇಕೇ ಅಥವಾ ಗನ್ ಇರಬೇಕೇ ಎಂಬುದನ್ನು ಫೆಬ್ರವರಿ 8ರಂದು ನೀವೇ ನಿರ್ಧರಿಸಿ ಎಂದು ಕೇಜ್ರೀವಾಲ್ ಹೇಳಿದ್ದಾರೆ. ಫೆಬ್ರವರಿ 8ರಂದು ದಿಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಮತದಾರರು ಪ್ರಜ್ಞಾವಂತರಾಗಿ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಕೇಜ್ರೀವಾಲ್ ಮನವಿ ಮಾಡಿದರು. ಜಾಮಿಯಾ ವಿವಿ ಬಳಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ ಯುವಕನಿಗೆ ಬಿಜೆಪಿ ರಕ್ಷಣೆ ನೀಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಆರೋಪಿ ಕೈಯಲ್ಲಿ ಗನ್ ಹಿಡಿದು ಮುಂದುವರಿಯುತ್ತಿದ್ದರೂ ಪೊಲೀಸರು ಸಕಾಲಿಕ ಕ್ರಮಕ್ಕೆ ಮುಂದಾಗದಿರುವುದು ಖಂಡನೀಯ ಎಂದು ಆಪ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News