ಕ್ಷಮೆಯಾಚನೆ, 25 ಲಕ್ಷ ರೂ. ಪರಿಹಾರ ನೀಡಲು ಇಂಡಿಗೋಗೆ ಕುನಾಲ್ ಕಾಮ್ರಾ ನೋಟಿಸ್

Update: 2020-02-01 10:05 GMT

ಮುಂಬೈ: ಅರ್ನಬ್ ಗೋಸ್ವಾಮಿ ಜೊತೆಗಿನ ವಿಡಿಯೋ ವಿಚಾರಕ್ಕೆ ಸಂಬಂಧಿಸಿ ತನಗೆ ವಿಧಿಸಿರುವ ಆರು ತಿಂಗಳ ವಿಮಾನಯಾನ ನಿಷೇಧ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯುವಂತೆ ಮತ್ತು ಇದರಿಂದ ಆಗಿರುವ ಮಾನಸಿಕ ವೇದನೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಿ, ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರಾ ಇಂಡಿಗೋ ಕಂಪನಿಗೆ ಕಾನೂನಾತ್ಮಕ ನೋಟಿಸ್ ನೀಡಿದ್ದಾರೆ.

ಮೋದಿ ಸರಕಾರದ ಕಟು ಟೀಕಾಕಾರರಾಗಿರುವ ಕಾಮ್ರಾ ಅವರು 'ರಿಪಬ್ಲಿಕ್ ಟಿವಿ' ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ವಿಮಾನಯಾನದ ವೇಳೆ ತರಾಟೆಗೆ ತೆಗೆದುಕೊಂಡ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಇಂಡಿಗೋ ಸಂಸ್ಥೆ ಪ್ರಯಾಣ ನಿಷೇಧ ಹೇರಿತ್ತು.

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಒತ್ತಾಯದ ಹಿನ್ನೆಲೆಯಲ್ಲಿ ಇಂಡಿಗೋ, ಸ್ಪೈಸ್ ಜೆಟ್, ಗೋ ಏರ್ ಹಾಗೂ ಏರ್ ಇಂಡಿಯಾ ಕೂಡಾ ಪ್ರಯಾಣ ನಿಷೇಧ ಹೇರಿದ್ದವು. ವಿಸ್ತಾರ ಹಾಗೂ ಏರ್ ಏಷ್ಯಾ ಕೂಡಾ ಈ ಕ್ರಮದ ಬಗ್ಗೆ ಚಿಂತಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News