'ಈ ಹಿಂದೆ ಘೋಷಿಸಿದ 100 ಸ್ಮಾರ್ಟ್ ಸಿಟಿಗಳು ಎಲ್ಲಿ?': ಕೇಂದ್ರ ಬಜೆಟ್ ಬಗ್ಗೆ ಟ್ವಿಟರಿಗರ ಪ್ರಶ್ನೆ

Update: 2020-02-01 10:44 GMT

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಬಜೆಟ್ ಮಂಡಿಸಿದ್ದು, ಟ್ವಿಟರ್ ನಲ್ಲಿ ಕುತೂಹಲಕಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

"ಮಧ್ಯಮವರ್ಗದ ಜನ ಬಜೆಟ್ ಪ್ರಯೋಜನ ಹುಡುಕುತ್ತಿದ್ದಾರೆ" ಎಂದು ಒಬ್ಬರು ಹೇಳಿದ್ದರೆ, "ಕಿತ್ನಾ ಟ್ಯಾಕ್ಸ್ ದೇನಾ ಪಡೇಗಾ ಎಂದು ಪ್ರತಿಯೊಬ್ಬರೂ ಚಿಂತಿತರಾಗಿದ್ದರೆ, ಸಿಎ ವಿದ್ಯಾರ್ಥಿಗಳು ಕಿತ್ನಾ ನಯಾ ಟ್ಯಾಕ್ಸ್ ಪಡ್ನಾ ಪಡೇಗಾ" ಎಂದು ಚಿಂತಿಸುತ್ತಿದ್ದಾರೆ ಎಂದು ಮತ್ತೊಬ್ಬ ಟ್ವೀಟ್ ಬಳಕೆದಾರರು ಹೇಳಿದ್ದಾರೆ.

'ಮಿಡಲ್ ಕ್ಲಾಸ್: ಇಸ್ ಬಾರ್ ಹಮ್ಕೊ ಬಂಪರ್ ಬೆನಿಫಿಟ್ ಮಿಲೇಗಾ' ಎಂದು ಮತ್ತೊಬ್ಬ ಜಾಲತಾಣಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಐದು ಹೊಸ ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸುವ ಪ್ರಸ್ತಾವ ಮಂಡಿಸಿದ ಸಚಿವರಿಗೆ, "ಹಿಂದಿನ 100 ಸ್ಮಾರ್ಟ್ ಸಿಟಿಗಳ ಕಥೆ ಏನಾಯಿತು" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹೊಸ ವ್ಯವಸ್ಥೆಯಡಿ 5ರಿಂದ 7.5 ಲಕ್ಷ ರೂಪಾಯಿ ಆದಾಯ ಹೊಂದಿರುವವರು 10% ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ವರ್ಗದ ಜನ ಶೇಕಡ 20ರಷ್ಟು ತೆರಿಗೆ ಪಾವತಿಸುತ್ತಿದ್ದರು. 7.5 ಲಕ್ಷದಿಂದ 10 ಲಕ್ಷವರೆಗಿನ ಆದಾಯಕ್ಕೆ ಶೇಕಡ 15, 12.5 ಲಕ್ಷದಿಂದ 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡ 25 ಹಾಗೂ ಹೆಚ್ಚಿನ ಮೊತ್ತಕ್ಕೆ ಶೇಕಡ 30ರಷ್ಟು ತೆರಿಗೆ ಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News