×
Ad

ಎಲ್ಐಸಿ ಶೇರು ಮಾರಾಟ: ಸರಕಾರದ ನಿರ್ಧಾರದ ವಿರುದ್ಧ ನೌಕರರ ಸಂಘ ಆಕ್ರೋಶ

Update: 2020-02-01 16:47 IST

ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದಲ್ಲಿರುವ ತನ್ನ ಹೂಡಿಕೆಯಲ್ಲಿ ಅಲ್ಪ ಪಾಲನ್ನು ಸರಕಾರವು ಮಾರಾಟ ಮಾಡಲಿದೆ ಮತ್ತು ಖಾಸಗಿ ಹೂಡಿಕೆ ಅವಕಾಶ ಕಲ್ಪಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಆದರೆ ಸರಕಾರದ ಈ ನಡೆಯನ್ನು ಎಲ್ ಐಸಿ ನೌಕರರ ಸಂಘ ವಿರೋಧಿಸಿದ್ದು, ಇದು ದೇಶದ ಹಿತಾಸಕ್ತಿಗೆ ವಿರುದ್ಧ ಎಂದಿದೆ.

"ಎಲ್ ಐಸಿಯಲ್ಲಿರುವ ಸರಕಾರ ಪಾಲನ್ನು ಮಾರಾಟ ಮಾಡುವ ಸರಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಈ ನಡೆಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ" ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News