×
Ad

ಬಜೆಟ್ 2020: ಗ್ರಾಹಕರಿಗೆ ಯಾವುದು ದುಬಾರಿ, ಯಾವುದು ಅಗ್ಗ?

Update: 2020-02-01 17:12 IST

ಹೊಸದಿಲ್ಲಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಸುಮಾರು 2 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಅವರು ಹಲವು ಯೋಜನೆಗಳನ್ನು ಘೋಷಿಸಿದರು.

ಯಾವುದು ದುಬಾರಿ?

ಪಾದರಕ್ಷೆಗಳು

ಪೀಠೋಪಕರಣಗಳು- ಸೀಟ್ ಗಳು, ಲ್ಯಾಂಪ್ ಗಳು,

ಆಮದು ಮಾಡಿದ ವೈದ್ಯಕೀಯ ಸಲಕರಣೆಗಳು

ಸಿಗರೇಟ್ ಗಳು, ತಂಬಾಕು ಉತ್ಪನ್ನಗಳು

ಚೈನಾ ಸೆರಾಮಿಕ್ ನ ಟೇಬಲ್ ವೇರ್, ಕಿಚನ್ ವೇರ್ ಗಳು , ಉಕ್ಕು, ತಾಮ್ರ, ಗಾಜಿನ ವಸ್ತುಗಳು, ಬೀಗಗಳು, ಪೊರಕೆ, ಬಾಚಣಿಕೆಗಳು,

ಫ್ಯಾನ್ ಗಳು, ಆಹಾರದ ಗ್ರೈಂಡರ್ ಗಳು, ಮಿಕ್ಸರ್ ಗಳು, ಶೇವರ್ ಗಳು, ವಾಟರ್ ಹೀಟರ್, ಹೇರ್/ಹ್ಯಾಂಡ್ ಡ್ರೈಯರ್, ಓವನ್, ಕುಕರ್ ಗಳು, ಟೋಸ್ಟರ್ ಗಳು, ಕಾಫಿ/ಟೀ ಮೇಕರ್ ಗಳು, ಹೀಟರ್ ಗಳು

ಪೇಪರ್ ಟ್ರೇ, ಬೈಂಡರ್ ಗಳು, ಕ್ಲಿಪ್ ಗಳು, ಸ್ಟ್ಯಾಪಲ್ಸ್, ಸೈನ್ ಪ್ಲೇಟ್ ಗಳು, ನೇಮ್ ಪ್ಲೇಟ್ ಗಳು

ವಾಣಿಜ್ಯ ವಾಹನದ ಭಾಗಗಳು

ಕೆಲವು ಆಲ್ಕೊಹಾಲ್ ಯುಕ್ತ ಪಾನೀಯಗಳು

ಮೊಬೈಲ್ ಫೋನ್ ಗಳು

ಆಮದು ಮಾಡಿದ ಎಲೆಕ್ಟ್ರಿಕ್ ವಾಹನಗಳು

ಯಾವುದು ಅಗ್ಗ?

ಲೈಟ್ ವೈಟ್ ಕೋಟೆಡ್ ಪೇಪರ್

ಕ್ರೀಡಾ ಸಾಮಗ್ರಿ

ಕಚ್ಚಾ ಸಕ್ಕರೆ, ಕೃಷಿ-ಪ್ರಾಣಿ ಆಧಾರಿತ ಉತ್ಪನ್ನಗಳು, ಕೆನೆ ರಹಿತ ಹಾಲು, ಸೋಯಾ ಫೈನರ್, ಸೋಯಾ ಪ್ರೊಟೀನ್ ಮೇಲಿನ ಮೇಲಿನ ಸುಂಕ ವಿನಾಯಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News