×
Ad

Breaking News: ಶಾಹಿನ್ ಬಾಗ್ ನಲ್ಲಿ ಗುಂಡು ಹಾರಾಟ: ದುಷ್ಕರ್ಮಿ ಪೊಲೀಸ್ ವಶಕ್ಕೆ

Update: 2020-02-01 17:25 IST

ಹೊಸದಿಲ್ಲಿ: ಸಿಎಎ ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವ ಶಾಹಿನ್ ಬಾಗ್ ನಲ್ಲಿ ದುಷ್ಕರ್ಮಿಯೊಬ್ಬ ಗುಂಡು ಹಾರಾಟ ನಡೆಸಿದ್ದಾನೆ. ಗುಂಡು ಹಾರಾಟ ನಡೆಸಿದವನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ವಶಕ್ಕೆ ಪಡೆದ ನಂತರ ಆತ ಮಾತನಾಡಿದ್ದು, " ಈ ದೇಶದಲ್ಲಿ ಬೇರೆ ಯಾರದ್ದೂ ನಡೆಯಲ್ಲ, ಹಿಂದೂಗಳದ್ದು ಮಾತ್ರ ನಡೆಯುತ್ತೆ" ಎಂದಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಆರೋಪಿ ತನ್ನನ್ನು ಕಪಿಲ್ ಗುಜ್ಜರ್ ಎಂದು ಹೇಳಿಕೊಂಡಿದ್ದಾನೆ. ತಾನು ನೋಯ್ಡಾ ಗಡಿ ಸಮೀಪದ ದಲ್ಲುಪುರ ಗ್ರಾಮದ ನಿವಾಸಿ ಎಂದು ಆತ ಪ್ರತಿಪಾದಿಸಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ಶಹೀನ್‌ಬಾಗ್‌ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಜಾಮಿಯಾ ವಿವಿ ಹೊರಗಡೆ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದ. ಈ ಘಟನೆ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News