ದೂರದೃಷ್ಟಿ ಮತ್ತು ಕ್ರಿಯಾಶೀಲತೆಯ ಬಜೆಟ್: ಪ್ರಧಾನಿ ಮೋದಿ
Update: 2020-02-01 19:33 IST
ಹೊಸದಿಲ್ಲಿ, ಫೆ.1: ಕೇಂದ್ರ ಸರಕಾರದ ಬಜೆಟ್ ಅರ್ಥವ್ಯವಸ್ಥೆಗೆ ಪ್ರೇರಣೆ ಒದಗಿಸಲಿದೆ. ಇದು ದೂರದೃಷ್ಟಿ ಮತ್ತು ಕ್ರಿಯಾಶೀಲತೆ ಸಮ್ಮಿಲಿತವಾಗಿರುವ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್‌ನಲ್ಲಿ ಘೋಷಿಸಲಾಗಿರುವ ಪರಿಷ್ಕರಣೆಗಳು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಪ್ರೇರಣೆ ನೀಡಿ ಉದ್ಯೋಗಾವಕಾಶ ಹೆಚ್ಚಿಸುವ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಿದೆ ಎಂದು ಮೋದಿ ಹೇಳಿದ್ದಾರೆ. ತೆರಿಗೆ ಪ್ರಕ್ರಿಯೆಯನ್ನು ಸರಳವಾಗಿಸುವ ಮೂಲಕ, ‘ ಕನಿಷ್ಟ ಅಧಿಕಾರ ಗರಿಷ್ಟ ಆಡಳಿತ’ ಎಂಬ ಕೇಂದ್ರ ಸರಕಾರದ ಬದ್ಧತೆಯನ್ನು ಈ ಬಜೆಟ್ ಮತ್ತಷ್ಟು ಸದೃಢಗೊಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.