ವಾಸ್ತವಿಕ ಯೋಜನೆಗಳಿಲ್ಲದ ಬಜೆಟ್: ರಾಹುಲ್ ಟೀಕೆ
Update: 2020-02-01 19:44 IST
ಹೊಸದಿಲ್ಲಿ, ಫೆ.1: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಅನಗತ್ಯ ವಿಷಯಗಳೇ ತುಂಬಿದ್ದು ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕುರಿತಾದ ಯಾವುದೇ ವಾಸ್ತವಿಕ ಯೋಜನೆಗಳಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಬಜೆಟ್ ಕೇವಲ ಮಾತು ಮಾತ್ರ, ಕಾರ್ಯರೂಪದಲ್ಲಿ ಶೂನ್ಯ ಎಂಬ ಸರಕಾರದ ಮನಃಸ್ಥಿತಿಯನ್ನು ಸಮರ್ಪಕವಾಗಿ ವಿವರಿಸಿದೆ. ಸುತ್ತಿಬಳಸಿ ಹೇಳಿದ್ದನ್ನೇ ಹೇಳುವ, ಹೊಸದಾಗಿ ಏನನ್ನೂ ಹೇಳದ ಬಜೆಟ್ ಇದಾಗಿದೆ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ನೀರಸ ಬಜೆಟ್. ಅಭಿವೃದ್ಧಿಗೆ ಉತ್ತೇಜನ ನೀಡದ ನಿಸ್ಸತ್ವದ ಬಜೆಟ್ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.