ಭಾರತೀಯ ಆರ್ಥಿಕತೆ ಯಲ್ಲಿ ದಿಢೀರ್ ಹಿನ್ನಡೆಯಾಗಿದೆ: ಐಎಂಎಫ್ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ

Update: 2020-02-01 16:55 GMT

ವಾಶಿಂಗ್ಟನ್, ಫೆ. 1: ಭಾರತ ಕೆಲವು ಮಹತ್ವದ ಆರ್ಥಿಕ ಸುಧಾರಣೆಗಳನ್ನು ಕೈಗೊಂಡಿದ್ದು, ಅದು ದೀರ್ಘಾವಧಿಯಲ್ಲಿ ದೇಶಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಅಂತರ್‌ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಹೇಳಿದ್ದಾರೆ. ಆದರೆ, ಅವು ತಕ್ಷಣದ ದುಷ್ಪರಿಣಾಮಗಳನ್ನೂ ಹೊಂದಿವೆ ಎಂದರು.

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಕಾಣಿಸಿಕೊಂಡ ಬಿಕ್ಕಟ್ಟು ಹಾಗೂ ಜಿಎಸ್‌ಟಿ ಮತ್ತು ನೋ         ಟು ನಿಷೇಧ ಮುಂತಾದ ಪ್ರಮುಖ ಕ್ರಮಗಳಿಂದಾಗಿ ಭಾರತೀಯ ಆರ್ಥಿಕತೆಯು ದಿಢೀರ್ ಹಿನ್ನಡೆಯನ್ನು ಅನುಭವಿಸಿದೆ, ಆದರೆ, ಅದು ಹಿಂಜರಿತವಲ್ಲ ಎಂದು ಐಎಂಎಫ್ ಮುಖ್ಯಸ್ಥೆ ಹೇಳಿದರು.

‘‘2019ರಲ್ಲಿ ಭಾರತೀಯ ಆರ್ಥಿಕತೆಯು ದಿಢೀರ್ ಹಿನ್ನಡೆ ಅನುಭವಿಸಿದೆ. ನಾವು ನಮ್ಮ ಬೆಳವಣಿಗೆ ಮುನ್ನೋಟವನ್ನು ಕಳೆದ ವರ್ಷಕ್ಕೆ 4 ಶೇಕಡಕ್ಕೆ ಇಳಿಸಿ ಪರಿಷ್ಕರಿಸಬೇಕಾಯಿತು. 2020ರಲ್ಲಿ ನಾವು 5.8 ಶೇಕಡ ಹಾಗೂ 2021ರಲ್ಲಿ 6.5 ಶೇಕಡ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ’’ ಎಂದು ಶುಕ್ರವಾರ ಇಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಈ ಆರ್ಥಿಕ ಹಿನ್ನಡೆಗೆ ಮುಖ್ಯ ಕಾರಣ ಬ್ಯಾಂಕಿಂಗೇತರ ಆರ್ಥಿಕ ಸಂಸ್ಥೆಗಳಲ್ಲಿ ಕಾಣಿಸಿಕೊಂಡ ಬಿಕ್ಕಟ್ಟು’’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವುದಕ್ಕೆ ಒಂದು ದಿನ ಮುಂಚೆ ಹೇಳಿದರು.

‘‘ಜಿಎಸ್‌ಟಿ ಜಾರಿ ಮತ್ತು ನಗದು ಅಮಾನ್ಯೀಕರಣ ಕ್ರಮಗಳು ದೂರಗಾಮಿ ಪ್ರಯೋಜನಗಳನ್ನು ಹೊಂದಿವೆ. ಆದರೆ, ಅವುಗಳು ತಕ್ಷಣದ ದುಷ್ಪರಿಣಾಮಗಳನ್ನೂ ಹೊಂದಿವೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News