ಈಶ್ವರಮಂಗಲ : ಫಾತಿಮಾ ಮಹಿಳಾ ಕಾಲೇಜು ವಾರ್ಷಿಕೋತ್ಸವ

Update: 2020-02-02 12:29 GMT

ವಿಟ್ಲ : ಮೇನಾಲ ಫಾತಿಮಾ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ "ಫಾತಿಮಾ ಕಾಲೇಜ್ ಡೇ" ಕಾರ್ಯಕ್ರಮವು ಕಾಲೇಜು ಸಭಾಂಗಣದಲ್ಲಿ  ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇನಾಲ ಜುಮಾ ಮಸ್ಜಿದ್ ಖತೀಬರು ಹಾಗೂ ಫಾತಿಮಾ ವಿಮೆನ್ಸ್ ಕಾಲೇಜಿನ ಶರೀಅತ್ ವಿಭಾಗದ ಮುಖ್ಯಸ್ಥರಾದ  ಶಿಹಾಬುದ್ದೀನ್ ಮುಸ್ಲಿಯಾರ್ ಮಾತನಾಡಿ, ಈ ಭಾಗದ ವಿದ್ಯಾರ್ಥಿನಿಯರು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಫಾತಿಮಾ ಮಹಿಳಾ ಕಾಲೇಜನ್ನು ಪ್ರಾರಂಭಿಸಿದ ಹನೀಫ್ ಮಧುರಾರವರ ಪರಿಶ್ರಮ ಪ್ರಶಂಸನೀಯ ಎಂದ ಅವರು ವಿದ್ಯಾರ್ಥಿನಿಯರು ಇಲ್ಲಿ ಕಲಿತ ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕುಂಬ್ರ ರೇಂಜ್ ಜಮೀಯತುಲ್ ಮುಅಲ್ಲಿಮೀನ್  ಅಧ್ಯಕ್ಷರು ಹಾಗೂ ರಕ್ಷಕ-ಶಿಕ್ಷಕ  ಸಂಘದ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಮಾತನಾಡಿ ಈ ಸಂಸ್ಥೆಯಿಂದ ದೊರಕುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ  ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ್ದ ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಹೀರಾ, ಪಾಳ್ಯತಡ್ಕ ಖತೀಬ್ ಇಸಾಕ್ ದಾರಿಮಿ, ಮೇನಾಲ ಮಸೀದಿಯ ಕಾರ್ಯದರ್ಶಿ ಕೆ.ಎಂ ಮಹಮ್ಮದ್ ಕುಂಞಿ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ ಸಲಹಾ ಸಮಿತಿ ಸದಸ್ಯರಾದ ಇ.ಎ ಮಹಮ್ಮದ್ ಕುಂಞಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್,ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಇಬ್ರಾಹಿಂ ಬಡಗನ್ನೂರು, ಇಬ್ರಾಹಿಂ, ಶಿವಬಾಲನ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಮಹಮ್ಮದ್ ಸಾಮು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಹನ್ನತ್ ಸ್ವಾಗತಿಸಿ , ಇಸ್ಮಾಯಿಲ್ ವಂದಿಸಿದರು. ಜುನೈದ್ ಉಸ್ತಾದ್  ನಿರೂಪಿಸಿದರು.

ಮಹಿಳೆಯರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ನಂತರ ಮಹಿಳೆಯರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರ ಮ ನಡೆಯಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮಾಜಿ ಅರೇಬಿಕ್ ಉಪನ್ಯಾಸಕಿ ಬುಶ್ರಾ ಮುಈನ ರವರು ಮಹಿಳಾ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಮಧುರಾ ಎಜುಕೇಶನಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್ ಕೆ, ಮುಖ್ಯ ಶಿಕ್ಷಕಿ ಮಮತಾ, ಖದೀಜತ್ ರೈಹಾನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಖದೀಜತ್ ಫಮೀನಾ ಕಿರಾಅತ್ ಪಟಿಸಿದರು. ಮಿಸ್ರಿಯಾ ಸ್ವಾಗತಿಸಿ, ಫಾತಿಮತ್ ತಸ್ರೀನ ವಂದಿಸಿದರು. ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ ಅತಿಥಿಗಳನ್ನು ಪರಿಚಯಿಸಿದರು. ಝೈನಬ ಶುರೈರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News