ಜನಸ್ತೋಮದ ಮಧ್ಯೆ ಮಲ್ಪೆ ಬೀಚ್ ಉತ್ಸವಕ್ಕೆ ಸಂಭ್ರಮದ ತೆರೆ

Update: 2020-02-02 14:55 GMT

ಮಲ್ಪೆ : ಉಡುಪಿ ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಪಶುಪಾಲನಾ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನಾ ಮಂದಿರಗಳ ಸಹಯೋಗದೊಂದಿಗೆ ಮಲ್ಪೆ ಬೀಚ್‌ನಲ್ಲಿ ನಡೆದ ಎರಡು ದಿನಗಳ ಮಲ್ಪೆ ಬೀಚ್ ಉತ್ಸವ ರವಿವಾರ ತೆರೆ ಕಂಡಿತು.

ಉತ್ಸವದ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಇಡೀ ಪರಿಸರದಲ್ಲಿ ಹಬ್ಬದ ವಾತಾವರಣ ಕಂಡುಬಂತು. ಕುಟುಂಬ ಸಮೇತ ರಾಗಿ ಆಗಮಿಸಿದ ಜನರು, ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟರು. ತೀರದಲ್ಲಿ ಒಂಟೆ ಸವಾರಿ, ದೋಣಿ ವಿಹಾರಗಳ ಮೋಜು ಮಸ್ತಿಯಲ್ಲಿ ತೊಡಗಿ ಹೊಸ ಅನುಭವ ಪಡೆದುಕೊಂಡರು.

ಮಕ್ಕಳು ಸೇರಿದಂತೆ ಹಿರಿಯರು, ಮಹಿಳೆಯರು ಗಾಳಿಪಟ ಹಾರಾಟ ನಡೆಸಿ ಸಂಭ್ರಮ ಪಟ್ಟರು. ಮರಳು ಶಿಲ್ಪ ಬಿಡಿಸಿದ ಕಲಾವಿದರು ಜನರ ಮನಸ್ಸು ಗೆದ್ದರು. ಬೀಚ್‌ನಲ್ಲಿ ತೆರೆಯಲಾದ ವಿವಿಧ ಆಹಾರ ಮಳಿಗೆಯಲ್ಲಿ ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಚಿಕನ್ ಪ್ರೈಡ್‌ರೈಸ್, ಎಗ್ ಪ್ರೈಡ್‌ರೈಸ್, ಎಗ್ ಮತುತಿ ಚಿಕನ್ ಹಕ್ಕಾ ನೂಡಲ್ಸ್, ಸಸ್ಯಾಹಾರದಲ್ಲಿ ವಡಪಾವ್, ಬ್ರೆಡ್ ಪ್ಯಾಟೀಸ್, ಚಿಲ್ಲಿ ಪಕೋಡ, ಗೋಬಿ ಮಂಚೂರಿ, ಓನಿಯನ್ ಬಜ್ಜಿ, ವೆಚ್ ನೂಡಲ್ಸ್, ಪ್ರೈಡ್‌ರೈಸ್ ಸಹಿತ ವಿವಿಧ ಕರಾವಳಿಯ ಖಾದ್ಯಗಳನ್ನು ತಯಾರಿಸ ಲಾಗಿತ್ತು.

ಮೀನಿನ ಫ್ರೈ ಸೇರಿದಂತೆ ಕರಾವಳಿಯ ವೈವಿದ್ಯಮಯ ಆಹಾರಗಳಿಗೆ ಜನರು ಮುಗಿಬಿದ್ದು ರುಚಿ ಸವಿದರು. ಮೀನಿನ ಮಸಾಲೆ, ಗುಡಿಕೈಗಾರಿಕೆ, ದೇಶಿಯ ತಂಪು ಪಾನೀಯಗಳ ಸ್ಟಾಲ್‌ಗಳಿಗೂ ಜನರಿಂದ ಉತ್ತಮ ಸ್ಪಂದನೆ ದೊರೆ ಯಿತು. ಶನಿವಾರದಂದು ಅವಿಭಜಿತ ದ.ಕ. ಜಿಲ್ಲಾಮಟ್ಟದ ಪುರುಷರ ಹೊನಲು ಬೆಳಕಿನ ಪ್ರೊಕಬಡ್ಡಿ ಪಂದ್ಯಾವಳಿ ಜರಗಿತು. ರವಿವಾರ ಬೆಳಗ್ಗೆ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟಗಳು ನಡೆದವು. ಶಾಲಾ ಕಾಲೇಜು ಮಕ್ಕಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಯಲ್ಲಿ ಸುಮಾರು 200ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ನಗರಸಭಾ ಸದಸ್ಯರುಗಳು, ಬೀಚ್ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ

ಬೀಚ್ ಉತ್ಸವದ ಪ್ರಯುಕ್ತ ಏರ್ಪಡಿಸಲಾದ ಗಾಳಿಪಟಗಳ ಸ್ಪರ್ಧೆಯಲ್ಲಿ ವಿವಿಧ ಬಗೆಯ ಗಾಳಿಪಟಗಳು ಮನಸೂರೆಗೊಳಿಸಿದವು. ಬಾನಂಗಳ ದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಗಮನ ಸೆಳೆದವು. ಪಕ್ಷಿಗಳು, ಪ್ರಾಣಿಗಳು, ಹಾವುಗಳು ಸೇರಿದಂತೆ ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿ ಬಂದ ಗಾಳಿಪಟಗಳು ಎಲ್ಲರ ಆಕರ್ಷಿಸಿತು.

ಅದೇ ರೀತಿ ಜಿಲ್ಲೆಯ ಪ್ರವಾಸಿ ತಾಣ, ಸ್ವಚ್ಚ ಭಾರತ್ ಮತ್ತು ನಮ್ಮ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಮರಳುಶಿಲ್ಪ ಸ್ಪರ್ಧೆಯನ್ನು ಏರ್ಪ ಡಿಸಲಾಗಿತ್ತು. ಇದರಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ಮೂಲಕ ಕಡಲ ತೀರದಲ್ಲಿ ಅದ್ಬುತ ಮರಳ ಶಿಲ್ಪಗಳು ಮೂಡಿ ಬಂದವು.

ಗಮನ ಸೆಳೆದ ಶ್ವಾನ ಪ್ರದರ್ಶನ

ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾದ ಶ್ವಾನ ಪ್ರದರ್ಶನದಲ್ಲಿ ವಿವಿಧ ಕಡೆ ಗಳಿಂದ ಆಗಮಿಸಿದ್ದ ಭಾರತೀಯ ಹಾಗೂ ವಿದೇಶಿ ತಳಿಯ ನೂರಾರು ಶ್ವಾನಗಳು ಪಾಲ್ಗೊಡಿದ್ದವು. ಸ್ಥಳೀಯ ತಳಿಯಾದ ಮಧೋಳ, ವಿದೇಶಿ ತಳಿ ಯಾದ ನೆಪೊಲಿಯನ್ ಮಸ್ತ್ ಶ್ವಾಗಳು ಎಲ್ಲರ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News