ಕತರ್ ಇಂಡಿಯನ್ ಸೋಷಿಯಲ್ ಫೋರಮ್ ವತಿಯಿಂದ ರಕ್ತದಾನ ಶಿಬಿರ

Update: 2020-02-03 05:27 GMT

ದೋಹ : ಭಾರತದ ಗಣರಾಜ್ಯೋತ್ಸವದ ಅಂಗವಾಗಿ, ಕತರ್ ಇಂಡಿಯನ್ ಸೋಷಿಯಲ್ ಫೋರಮ್ (ಕ್ಯೂಐಎಸ್ಎಫ್), ಕರ್ನಾಟಕ ರಾಜ್ಯದಿಂದ, ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ ಹಮದ್ ಆಸ್ಪತ್ರೆಯ ರಕ್ತದಾನ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು  ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ನಝೀರ್ ಪಾಷ ವಹಿಸಿದ್ದರು. ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯದ ಉಪಾಧ್ಯಕ್ಷ ಝಿಯಾಉಲ್ ಹಕ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಐಸಿಸಿ ಅಧ್ಯಕ್ಷ ಮಣಿಕಂಠನ್ ಎಪಿ ಉದ್ಘಾಟನೆ ಮಾಡಿ, ನಂತರ ಮಾತನಾಡಿದ ಅವರು ಮಾನವ ಸೇವೆಯೇ ದೇವರ ಸೇವೆ, ರಕ್ತ ದಾನ ಮಾನವರ ಜೀವ ಉಳಿಸುವುದರೊಂದಿಗೆ, ರಕ್ತದಾನಿಗೆ ದೈವಾಶೀರ್ವಾದ ಕೂಡ ಸಿಗುವುದರಿಂದ ಇದೊಂದು ಮಹತ್ತರ ಕಾರ್ಯ ಮತ್ತು ಸಮಯಕ್ಕೆ ಅತಿ ಹೆಚ್ಚಿನ ಮಹತ್ವ ಕೊಡುವುದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು.

ಕ್ಯೂಐಎಸ್ಎಫ್ ಕೇಂದ್ರ ಸಮೀತಿಯ ಅಧ್ಯಕ್ಷ ಸಯೀದ್ ಕೋಮಾಚಿ, ಹಮದ್ ಆಸ್ಪತ್ರೆಯ ಖ್ಯಾತ ವಿಕಿರಣಶಾಸ್ತ್ರಜ್ಞ ಡಾ. ವಿಶ್ವನಾಥ ಕಿಣಿ  ಮಾತನಾಡಿದರು. ಎಸ್ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್ ಮತ್ತು ಏಷ್ಯನ್ ಮೆಡಿಕಲ್ ಸೆಂಟರ್ ನ  ಡಾ. ಹಾರೂನ್  ಕ್ಯೂಐಎಸ್ಎಫ್ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಕ್ಯೂಐಎಸ್ಎಫ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಸಲಾಂ ಕುನ್ನಮಲ್, ಕಾರ್ಯದರ್ಶಿ ಬಶೀರ್ ಅಹ್ಮದ್, ಉತ್ತರ ರಾಜ್ಯಗಳ ಅಧ್ಯಕ್ಷ  ಫಸೀಉದ್ದೀನ್, ಕ್ಯೂಐಎಸ್ಎಫ್ ರಾಜ್ಯ ಮತ್ತು ಶಾಖೆಗಳ ಪದಾಧಿಕಾರಿಗಳಾದ ಲತೀಫ್ ಮಡಿಕೇರಿ, ಝಕರೀಯ ಪಾಂಡೇಶ್ವರ, ಸಲೀಂ ಬಂಗಾಡಿ, ಮುಜೇಬುಲ್ಲಾ ಖಾನ್, ನಯೀಮ್ ಬೆಳಪು, ಇಬ್ರಾಹಿಂ ಯುಬಿ, ತೌಫೀಕ್, ಅನ್ವರ್ ಅಂಗರಗುಂಡಿ, ರಿಝ್ವಾನ್ ಕಲ್ಲಡ್ಕ, ಆಸಿಫ್ ಬನ್ನೂರು, ಇಮ್ತಿಯಾಝ್ ಕಾರ್ನಾಡ್, ಜಲೀಲ್ ಕಲ್ಲಡ್ಕ, ಹನೀಫ್ ಮೊಂಟೆಪದವ್, ರಫೀಕ್ ಉಪ್ಪಿನಂಗಡಿ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News