×
Ad

ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಎಂದ ಕೇಂದ್ರ ಸಚಿವ ಜಾವಡೇಕರ್

Update: 2020-02-03 16:23 IST

ಹೊಸದಿಲ್ಲಿ: ದಿಲ್ಲಿ ಸಿಎಂ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ , ಕೇಜ್ರಿವಾಲ್ ರನ್ನು ಒಬ್ಬ ಭಯೋತ್ಪಾದಕ ಎಂದಿದ್ದಾರೆ.

"ಒಮ್ಮೆ ಕೇಜ್ರಿವಾಲ್ ಹಿಂದೆ ನಿಂತಿದ್ದ ದಿಲ್ಲಿಯ ಜನರು ಈಗ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೊಂದು ಕಾರಣವಿದೆ" ಎಂದವರು ಹೇಳಿದರು.

ತಾನು ಭಯೋತ್ಪಾದಕನೇ ಎಂದು ಕೇಳುತ್ತಾ ಕೇಜ್ರಿವಾಲ್ ಅಮಾಯಕನಂತೆ ವರ್ತಿಸುತ್ತಾರೆ. ನೀವೊಬ್ಬ ಭಯೋತ್ಪಾದಕ. ಇದಕ್ಕೆ ಹಲವು ಸಾಕ್ಷಿಗಳಿವೆ. ಅರಾಜಕತೆ ನಡೆಸುವವನು ಮತ್ತು ಭಯೋತ್ಪಾದಕನ ನಡುವೆ ಹೆಚ್ಚೇನೂ ವ್ಯತ್ಯಾಸಗಳಿಲ್ಲ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News