ಜಾಮಿಯಾದಲ್ಲಿ ನಡೆದ ಗುಂಡಿನ ದಾಳಿ 'ಅತಿರೇಕದ ರಾಷ್ಟ್ರೀಯತೆ'ಯ ಫಲ: ಗಾಯಾಳು ಶದಾಬ್
Update: 2020-02-03 17:19 IST
ಹೊಸದಿಲ್ಲಿ: ತನ್ನ ಮೇಲೆ ನಡೆದ ಗುಂಡಿನ ದಾಳಿ 'ಅತಿರೇಕದ ರಾಷ್ಟ್ರೀಯತೆಯ ಫಲ' ಎಂದು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿ ಹೇಳಿದ್ದಾರೆ.
ಈ ಗುಂಡಿನ ದಾಳಿ ಅತಿರೇಕದ ರಾಷ್ಟ್ರೀಯತೆಯ ಫಲ ಎಂದು ಶದಾಬ್ ಫಾರೂಕ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. "ನೀವು ಪ್ರತಿಭಟನೆ ನಡೆಸುವುದಾದರೆ ಮಾಡಿ. ಕಪ್ಪು ಬಾವುಟ ಪ್ರದರ್ಶಿಸಿ; ಕೆಂಪು ಬಾವುಟ ಪ್ರದರ್ಶಿಸಿ" ಎಂದವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕೇವಲ ದೆಹಲಿ ಪೊಲೀಸರನ್ನು ಹೊಣೆ ಮಾಡುವಂತಿಲ್ಲ ಎಂದಿದ್ದಾರೆ.
ಇದಕ್ಕೆ ಜಾಮಿಯಾ ಆಡಳಿತ ಮತ್ತು ಕುಲಪತಿ ಕೂಡಾ ಇದಕ್ಕೆ ಹೊಣೆ ಎಂದು ಸಮೂಹ ಸಂವಹನ ವಿದ್ಯಾರ್ಥಿಯಾಗಿರುವ ಅವರು ಹೇಳಿದ್ದಾರೆ.