ಲಂಕಾ: ಈ ಬಾರಿ ಸ್ವಾತಂತ್ರ್ಯ ದಿನ ತಮಿಳು ರಾಷ್ಟ್ರಗೀತೆ ಇಲ್ಲ

Update: 2020-02-03 15:08 GMT
ಫೈಲ್ ಚಿತ್ರ

ಕೊಲಂಬೊ (ಶ್ರೀಲಂಕಾ), ಫೆ. 3: 2016ರ ಬಳಿಕ ಮೊದಲ ಬಾರಿಗೆ, ಶ್ರೀಲಂಕಾದ 72ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ತಮಿಳು ರಾಷ್ಟ್ರಗೀತೆಯನ್ನು ಹಾಡಲಾಗುವುದಿಲ್ಲ, ಸಿಂಹಳಿ ಭಾಷೆಯಲ್ಲಿ ಮಾತ್ರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ ಎಂದು ಸರಕಾರ ಸೋಮವಾರ ಘೋಷಿಸಿದೆ.

2015ರಲ್ಲಿ ಆಗಿನ ಶ್ರೀಲಂಕಾ ಸರಕಾರವು ತಮಿಳು ಅಲ್ಪಸಂಖ್ಯಾತ ಸಮುದಾಯದಲ್ಲಿ ಸದ್ಭಾವನೆಯನ್ನು ನಿರ್ಮಿಸುವ ಕ್ರಮವಾಗಿ ತಮಿಳು ರಾಷ್ಟ್ರಗೀತೆಯನ್ನು ಕಾರ್ಯಕ್ರಮಕ್ಕೆ ಸೇರಿಸಿಕೊಂಡಿತ್ತು.

ರಾಷ್ಟ್ರಗೀತೆಯನ್ನು ಸಿಂಹಳ ಭಾಷೆಯಲ್ಲಿ ಮಾತ್ರ ಹಾಡಲಾಗುವುದು ಎಂದು ಶ್ರೀಲಂಕಾದ ಗೃಹ ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸಿಂಹಳ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಲು ಶ್ರೀಲಂಕಾದ ಸಂವಿಧಾನ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News