ವುಹಾನ್‌ನಿಂದ 254 ಮಂದಿಯನ್ನು ತೆರವುಗೊಳಿಸಿದ ಫ್ರಾನ್ಸ್: 36 ಮಂದಿಯಲ್ಲಿ ರೋಗ ಲಕ್ಷಣ

Update: 2020-02-03 16:46 GMT
ಫೈಲ್ ಚಿತ್ರ

ಪ್ಯಾರಿಸ್, ಫೆ. 3: ಚೀನಾದ ಕೊರೋನವೈರಸ್ ಸೋಂಕು ಪೀಡಿತ ನಗರ ವುಹಾನ್‌ನಿಂದ 254 ಮಂದಿಯನ್ನು ಫ್ರಾನ್ಸ್ ರವಿವಾರ ವಿಮಾನದ ಮೂಲಕ ತೆರವುಗೊಳಿಸಿದೆ. ಈ ಪೈಕಿ 36 ಮಂದಿ ರೋಗ ಲಕ್ಷಣಗಳನ್ನು ತೋರಿಸಿದ್ದಾರೆ ಎಂದು ಫ್ರಾನ್ಸ್‌ನ ಆರೋಗ್ಯ ಸಚಿವೆ ಆ್ಯಗ್ನೆಸ್ ಬಝಿನ್ ಹೇಳಿದ್ದಾರೆ.

‘‘ರೋಗ ಲಕ್ಷಣಗಳನ್ನು ತೋರಿಸಿರುವ ಸುಮಾರು 20 ಮಂದಿ ದಕ್ಷಿಣ ಫ್ರಾನ್ಸ್‌ನ ಇಸ್ಟ್ರಸ್ ವಿಮಾನ ನಿಲ್ದಾಣದಲ್ಲೇ ಇದ್ದಾರೆ. ಅವರು ಇನ್ನಷ್ಟು ತಪಾಸಣೆಗಳಿಗೆ ಒಳಗಾಗಲಿದ್ದಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಆ್ಯಗ್ನೆಸ್ ಹೇಳಿದರು. ರೋಗ ಲಕ್ಷಣಗಳನ್ನು ತೋರಿಸುತ್ತಿರುವವರಲ್ಲಿ ಫ್ರಾನ್ಸ್ ಮತ್ತು ಯುರೋಪೇತರ ರಾಷ್ಟ್ರೀಯರಿದ್ದಾರೆ.

ರೋಗ ಲಕ್ಷಣಗಳನ್ನು ತೋರಿಸಿರುವ ಇನ್ನೂ 16 ವಿದೇಶೀಯರನ್ನು ಅವರವರ ದೇಶಗಳಿಗೆ ಕಳಹಿಸಲಾಗಿದೆ ಎಂದರು.

ಇದು ಫ್ರಾನ್ಸ್ ದೇಶದ ಎರಡನೇ ತೆರವು ಕಾರ್ಯಾಚರಣೆಯಾಗಿದೆ. ಶುಕ್ರವಾರ ನಡೆದ ಮೊದಲ ತೆರವು ಕಾರ್ಯಾಚರಣೆಯಲ್ಲಿ ಸುಮಾರು 200 ಫ್ರಾನ್ಸ್ ನಾಗರಿಕರನ್ನು ವುಹಾನ್‌ನಿಂದ ಫ್ರಾನ್ಸ್‌ಗೆ ವಿಮಾನದಲ್ಲಿ ಕರೆತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News